twitter
    For Quick Alerts
    ALLOW NOTIFICATIONS  
    For Daily Alerts

    ಶಿವರಾಂ ವಿರುದ್ಧ ವೀರಶೈವ ಮಹಾಸಭಾ: ಅವರಿಗೆ ದಾವಣಗೆರೆ ಸಾಕಾಯಿತಾ?

    By Staff
    |

    *ವಿಘ್ನೕಶ್ವರ ಕುಂದಾಪುರ

    ಅಂಬರೀಶ್‌ ಹುಟ್ಟುಹಬ್ಬದ ಆಚರಣೆಯ ಸುದ್ದಿಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ . ಇದೀಗ ಐಎಎಸ್‌ ಅಧಿಕಾರಿ ಶಿವರಾಂ ಸರದಿ. ಅಂಬರೀಶ್‌ ವಜ್ರ ಕಿರೀಟಧಾರಣಾ ಸಮಾರಂಭದ ಸೂತ್ರಧಾರ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಸಿನಿಮಾ ನಟ ಕೆ. ಶಿವರಾಂ ಅಲ್ಲಿನ ವೀರಶೈವ ಮಹಾಸಭಾ ಕೆಂಗಣ್ಣಿಗೆ ತುತ್ತಾಗಿರುವುದು ಲೇಟೆಸ್ಟ್‌ ವರದಿ.

    ಸಿನಿಮಾ ನಟರೊಬ್ಬರ ಹುಟ್ಟುಹಬ್ಬ ಸಮಾರಂಭ ಏರ್ಪಡಿಸುವ ಮೂಲಕ ಶಿವರಾಂ ತಮ್ಮ ಸಿನಿಮಾ ಹುಚ್ಚನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ವೇದಿಕೆಯ ದಾವಣಗೆರೆ ಘಟಕದ ಅಧ್ಯಕ್ಷ ಜಿ. ಶಿವಯೋಗಪ್ಪ ಆಪಾದಿಸಿದ್ದಾರೆ.

    ಕಳೆದ ಸೋಮವಾರ ನಡೆದ ದರೋಡೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರೂ ಶಿವರಾಂ ಅವರು ಆ ಸ್ಥಳಕ್ಕೆ ಭೇಟಿ ಕೊಡುವ ಸೌಜನ್ಯವನ್ನೂ ತೋರಲಿಲ್ಲ, ಬದಲಾಗಿ ವಜ್ರಕಿರೀಟ ತೊಡಿಸುವ ಸಮಾರಂಭದಲ್ಲಿ ವ್ಯಸ್ತರಾಗಿದ್ದರು. ಇದು ಕರ್ತವ್ಯಲೋಪವಲ್ಲದೆ ಮತ್ತೇನು ಎನ್ನುವುದು ಶಿವಯೋಗಪ್ಪನವರ ಪ್ರಶ್ನೆ. ಹಲವಾರು ಜ್ವಲಂತ ಸಮಸ್ಯೆಗಳಲ್ಲಿ ಜಿಲ್ಲೆಯ ಜನತೆ ನರಳುತ್ತಿದ್ದರೂ, ಜಿಲ್ಲೆಗೆ ಯಾವ ರೀತಿಯೂ ಸಂಬಂಧ ಪಡದ ವ್ಯಕ್ತಿಯಾಬ್ಬನ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸುವುದು ಎಷ್ಟರಮಟ್ಟಿಗೆ ಸರಿ- ಅನ್ನುವ ಸಾರ್ವಜನಿಕ ಪ್ರಶ್ನೆಗೆ ಶಿವಯೋಗಪ್ಪ ದನಿಗೂಡಿಸುತ್ತಾರೆ.

    ಈ ಪ್ರಶ್ನೆಗಳಿಗೆ ಶಿವರಾಂ ಉತ್ತರಿಸುವರಾ ?

    ಹುಟ್ಟುಹಬ್ಬ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ನಾಗರಿಕ ವೇದಿಕೆ ಯಾವಾಗ ರಚನೆಯಾಯಿತು , ಅದರಲ್ಲಿರುವ ಪದಾಧಿಕಾರಿಗಳು ಯಾರು ಹಾಗೂ, ಈ ವೇದಿಕೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ನಿಧಿಯನ್ನು ಸಮಾರಂಭಕ್ಕಾಗಿ ಯಾವ ರೀತಿ ಖರ್ಚು ಮಾಡಿದೆ ಎಂಬುದರ ಬಗ್ಗೆ ವಿವರ ಕೇಳಿರುವ ಶಿವಯೋಗಪ್ಪ , ವಿವರ ನೀಡದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂರುವುದಾಗಿ ಹೇಳಿದ್ದಾರೆ.

    ಶಿವರಾಂ ಅವರ ಕರ್ತವ್ಯಲೋಪದ ಬಗ್ಗೆ ಒಡಕು ಮಾತು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ . ತಮ್ಮ ಸಿನಿಮಾಗಳ ನಿರ್ಮಾಣಕ್ಕೆ ಅಧಿಕಾರವನ್ನು ಬಳಸಿಕೊಳ್ಳುತ್ತಾರೆ ಎನ್ನುವ ಆರೋಪವನ್ನು ದೀರ್ಘಕಾಲದಿಂದ ಅರಗಿಸಿಕೊಂಡು ಬಂದಿರುವ ಶಿವರಾಂ, ಸರ್ಕಾರದ ಕಾರನ್ನು ತಮ್ಮ ಸಿನಿಮಾದ ನಾಯಕಿಯಾಬ್ಬಳ ವಿಹಾರಕ್ಕೆ ನೀಡಿದುದೂ ದೊಡ್ಡ ಸುದ್ದಿಯಾಗಿತ್ತು.

    ಇಷ್ಟಕ್ಕೂ ದಾವಣಗೆರೆಯಲ್ಲಿ ಅಂಬರೀಷ್‌ ಹುಟ್ಟುಹಬ್ಬ ನಡೆಸುವ ಅಗತ್ಯವಾದರೂ ಏನಿತ್ತು. ಕೆಲವು ಮೂಲಗಳ ಪ್ರಕಾರ- ದಾವಣಗೆರೆಯಲ್ಲಿ ಅವರ ಹೆಸರು ಹಳಸಿಹೋಗಿದೆ. ಅವರಿಗೆ ಹೊಸ ಹುಲ್ಲುಗಾವಲು ಅಗತ್ಯವಿದೆ. ಅದು ಮಂಡ್ಯ ಇರಬಹುದೆ?

    ತಮ್ಮ ಮೇಲಿನ ಆಪಾದನೆಗಳಿಗೆ ಶಿವರಾಂ ನೀಡುವ ಸಮಜಾಯಿಷಿಗಳೂ ಕುತೂಹಲಕರವಾಗಿವೆ. ಕೆಲವು ಸ್ಯಾಂಪಲ್‌ಗಳು ಇಲ್ಲಿವೆ-

    • ಈ ಪ್ರದೇಶದ ಜನರಿಗೆ ನಾನು ಬೇಡವಾಗಿದ್ದರೆ ವರ್ಗಾವಣೆಯಾಗಿ ಯಾವುದೇ ಪ್ರದೇಶಕ್ಕಾದರೂ ಹೋಗಲು ನಾನು ಸಿದ್ಧ.
    • ದರೋಡೆ ನಡೆದ ಸ್ಥಳಕ್ಕೆಲ್ಲಾ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕೆಂಬ ಕಾನೂನು ಎಲ್ಲೂ ಇಲ್ಲ. ಅದನ್ನೆಲ್ಲಾ ನಿರ್ವಹಿಸಲು ಪ್ರತ್ಯೇಕ ವಿಭಾಗವಿದೆ.
    • ನಾನೂ ಒಬ್ಬ ನಟನಾಗಿರುವುದರಿಂದ ಹುಟ್ಟು ಹಬ್ಬದ ವಜ್ರಕಿರೀಟ ತೊಡಿಸುವ ಸಮಾರಂಭದಲ್ಲಿ ಭಾಗವಹಿಸಿದ್ದೆ. ಅದು ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು.
    • ನಾನು ಜಿಲ್ಲೆಯ ಒಳಿತಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ.
    (ಇನ್ಫೋ ವಾರ್ತೆ)

    ವಾರ್ತಾ ಸಂಚಯ
    ಮುಖಪುಟ / ಸ್ಯಾಂಡಲ್‌ವುಡ್‌

    Friday, April 26, 2024, 6:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X