»   » ಉಪ್ಪಿ , ಪ್ರೇಮ ಹುಷಾರು! ಗುರ್ರ್‌ ಎಂದರು ಸಹ ಕಲಾವಿದರು

ಉಪ್ಪಿ , ಪ್ರೇಮ ಹುಷಾರು! ಗುರ್ರ್‌ ಎಂದರು ಸಹ ಕಲಾವಿದರು

Subscribe to Filmibeat Kannada

ಪ್ರೇಮ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಉಪೇಂದ್ರ ಎಚ್‌ಟೂಒ ಚಿತ್ರವನ್ನೇ ಮುಳುಗಿಸಲು ಹೊರಟಿದ್ದಾರೆ!

ಕರ್ನಾಟಕ ಕಿರಿಯ ಮತ್ತು ಸಹ ಕಲಾವಿದರ ಸಂಘದ ಸೊಲ್ಲಿದು. ನಿರ್ಮಾಪಕರನ್ನು ಶೋಷಿಸುತ್ತಿರುವ ನಾಯಕ ನಾಯಕಿಯ ಕುರಿತು ಕಟುವಾಗಿ ಟೀಕಿಸಿರುವ ಸಂಘ, ಸಿನಿಮಾ ಮುಗಿಸಿಕೊಡದಿದ್ದಲ್ಲಿ ಇಬ್ಬರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ. ಅಲ್ಲಿಗೆ ಪ್ರೇಮ ಹಾಗೂ ಉಪೇಂದ್ರಾಯಣದ ಎರಡನೇ ಅಧ್ಯಾಯ ಶುರುವಾದಂತಾಯಿತು.

ಎಚ್‌ಟೂಒ ಹಾಗೂ ಪರ್ವ ಚಿತ್ರಗಳು ಪೂರ್ಣವಾಗುವಲ್ಲಿ ಆಯಾ ಚಿತ್ರಗಳ ನಿರ್ಮಾಪಕರಿಗೆ ತೊಂದರೆಯಾದಲ್ಲಿ ಉಪೇಂದ್ರ ಹಾಗೂ ಪ್ರೇಮಾ ವಿರುದ್ಧ ಸಾವಿರಾರು ಸಹ ಕಲಾವಿದರೊಂದಿಗೆ ಕೆಂಪೇಗೌಡ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್‌.ಗಂಗಾಧರ್‌ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಂಘದ ಸುದಿ ್ದಪ್ರಕಟಣೆಯ ಮುಖ್ಯಾಂಶಗಳು

  1. ಪರ್ವ ಚಿತ್ರದ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಅವರಿಗೆ ಆಗಿರುವ ಅನ್ಯಾಯವನ್ನು ಕರ್ನಾಟಕ ಕಿರಿಯ ಮತ್ತು ಸಹ ಕಲಾವಿದರ ಸಂಘ ಖಂಡಿಸುತ್ತದೆ.
  2. ಒಬ್ಬ ಸಹ ಕಲಾವಿದರಾಗಿದ್ದ ಶಿಲ್ಪ ಶ್ರಿನಿವಾಸ್‌ ಕೋಟಿ ನಿರ್ಮಾಪಕರಾಗಲು ಎಷ್ಟು ಶ್ರಮ ಪಟ್ಟಿದ್ದಾರೆ ಎನ್ನುವುದನ್ನು ಪ್ರೇಮಾ ಯೋಚಿಸಬೇಕಿತ್ತು . ಪ್ರೇಮಾ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ.
  3. ನಟ ಉಪೇಂದ್ರ ಅವರು ಧನರಾಜ್‌ರ ಎಚ್‌ಟೂಒ ಚಿತ್ರವನ್ನೇ ಮುಳುಗಿಸಲು ಹೊರಟಿದ್ದಾರೆ. ಇಂಥ ನೀತಿ ಖಂಡನೀಯ ಹಾಗೂ ಹೋರಾಟಕ್ಕೆ ಇಳಿಯುವುದು ಅನಿವಾರ್ಯ.
  4. ಕೋಟ್ಯಂತರ ರುಪಾಯಿ ಬಂಡವಾಳ ಹೂಡಿ ಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ಕನ್ನಡ ನಟ ನಟಿಯರಿಂದಲೇ ಅನ್ಯಾಯವಾಗುತ್ತಿರುವುದು ಷೇಮ್‌ ಷೇಮ್‌!
ಸಂಘದ ಟೀಕೆ- ಎಚ್ಚರಿಕೆಗಳಿಗೆ ಉಪೇಂದ್ರ ಹಾಗೂ ಪ್ರೇಮ ಅವರ ಪ್ರತಿಕ್ರಿಯೆ ತಿಳಿದುಬಂದಿಲ್ಲ.

ಕಿರಿಕ್ಕಿನ ಸುತ್ತಮುತ್ತ
ಮುಖಪುಟ / ಸ್ಯಾಂಡಲ್‌ವುಡ್‌
Please Wait while comments are loading...