ಅಶೋಕ್ ದೇವ್ ನಿರ್ದೇಶನದಲ್ಲಿ ಮೂಡಿಬಂದ 3rd ಕ್ಲಾಸ್ ಚಿತ್ರಕ್ಕೆ ಜಗದೀಶ್ ಪವಾರ್ ಬಂಡವಾಳ ಹೂಡಿದ್ದಾರೆ. ನಮ್ ಜಗದೀಶ್ ಮತ್ತು ರೂಪಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಸಂಕಲನ ಮಾಡಿದ್ದಾರೆ.
ಕಥೆ: ಜಗ್ಗಿ ಒಬ್ಬ ನಿಯತ್ತಿನಲ್ಲಿ ಬದುಕುವ ಬಡ ಅನಾಥ ಯುವಕ. ಆತ ಬಡವ, ಕೆಳಮಟ್ಟದವನು ಎನ್ನುವ ಕಾರಣದಿಂದಲೇ ದ್ವೇಷಿಸುವ ಶ್ರೀಮಂತ ಯುವತಿ. ಆತನ ಒಳ್ಳೆಯತನ ಅರಿತ ಮೇಲೆ ಆಕೆಗೆ ಜಗ್ಗಿಯೆಂದರೆ ಪ್ರೀತಿ. ಸಿರಿವಂತಿಕೆಯಲ್ಲಿ ಬೆಳೆಸಿದ ತಂದೆಯಿಂದಾಗಿಯೇ ಮಗಳಲ್ಲಿ ಇಂಥ ಮನಸ್ಥಿತಿ. ಜಗ್ಗಿ ಅವಳನ್ನು ಪ್ರೀತಿಸುತ್ತಾನ? ಆ ಮದುವೆ ನಡೆಯುತ್ತದಾ ಎನ್ನುವುದು ಚಿತ್ರದ ಮುಂದಿನ ಕಥೆ.