4ಎನ್6 ಸಿನಿಮಾವನ್ನು ದರ್ಶನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಮರ್ಡರ್ ಮಿಸ್ಟರಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಚನಾ ಇಂದೆರ್ ಮತ್ತು ನವೀನ್ ಕುಮಾರ್ ಮಹಾದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಭವಾನಿ ಪ್ರಕಾಶ್, ಆದ್ಯ ಶೇಖರ್, ಅರ್ಜುನ್ ಎಂ ರಾವ್, ಸೌರವ್ ಪ್ರಶಾಂತ್ ತಾರಾಗಣದಲ್ಲಿದ್ದಾರೆ.
ಸಾಯಿ ಸೋಮೇಶ್ ಸಂಗೀತ, ಮತ್ತುರಾಜ್ ಜಯಶಂಕರ್ ಸಂಕಲನ ಹಾಗೂ ಚರಣ್ ತೇಜ್ ಛಾಯಾಗ್ರಹಣ ಸಿನಿಮಾಗಿದೆ. ಸಾಯಿ ಪ್ರೀತಿ ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: 4ಎನ್6 ಮೇ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿಲಿದೆ.