twitter

    ಅಧ್ಯಕ್ಷ ಇನ್ ಅಮೇರಿಕಾ ಕಥೆ

    ಹಿನ್ನಲೆ- ಯೋಗಾನಂದ ಮುದ್ದಾನ್ ನಿರ್ದೇಶಿಸಿರುವ `ಅಧ್ಯಕ್ಷ ಇನ್ ಅಮೇರಿಕಾ' ಚಿತ್ರದಲ್ಲಿ ಶರಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ.ಚಿತ್ರವನ್ನು ವಿಶ್ ಪ್ರಸಾದ್ ನಿರ್ಮಸಿದ್ದಾರೆ. ಅಮೇರಿಕಾದಲ್ಲಿ ಸುಮಾರು 40 ದಿನಗಳಿಗೂ ಹೆಚ್ಚು ಚಿತ್ರವನ್ನು ಚಿತ್ರೀಕರಿಸಲಾಗಿದೆ. 70 ಪ್ರತಿಶತ ಚಿತ್ರವನ್ನು ಅಮೇರಿಕಾದಲ್ಲಿ ಶೂಟಿಂಗ್ ಮಾಡಲಾಗಿದೆ.

    ಕಥೆ- ಚಿತ್ರದಲ್ಲಿ ನಾಯಕ ಹಣಕ್ಕಾಗಿ  ಜನರಿಗೆ ಚಿಕ್ಕಪುಟ್ಟ ಮೋಸಗಳನ್ನು ಮಾಡುತ್ತಾ ಬದುಕುತ್ತಿರುತ್ತಾನೆ. ಹಣಕ್ಕಾಗಿ ಏನು ಮಾಡಲು ರೆಡಿಯುರುವ ಇವನು ಹಣದ ಆಸೆಗೆ ಒಬ್ಬ ಶ್ರೀಮಂತನ ಅಂಗವಿಕಲ ತಂಗಿಯನ್ನು ಮದುವೆಯಾಗುವುದಾಗಿ ಮಾತು ಕೊಡುತ್ತಾನೆ. ಆದರೆ ಇದೇ ಸಮಯದಲ್ಲಿ ಅಮೇರಿಕಾದ ಶ್ರೀಮಂತ ಹುಡುಗಿಯಿಂದ ಇವನ ಮದುವೆಗೆ ಪ್ರೊಪೋಸಲ್ ಬರುತ್ತದೆ. ಇಲ್ಲಿನ ಮದುವೆ ಕ್ಯಾನ್ಸಲ್ ಮಾಡಿ ಅಮೇರಿಕಾಕ್ಕೆ ಹಾರುತ್ತಾನೆ. ಅಲ್ಲಿ ಹೋಗಿ ಅವಳನ್ನ ಮದುವೆಯಾಗುವ ಅವನಿಗೆ ಶಾಕಿಂಗ್ ಸತ್ಯ ಗೊತ್ತಾಗುತ್ತದೆ. ಅವಳು ಶ್ರೀಮಂತಳಾದರೂ ಅವಳ ಒಂದು ಸಮಸ್ಯೆ ಇವನಿಗೆ ನಯಾಪೈಸೆ ದೊರಕದ ಹಾಗೇ ಮಾಡುತ್ತೆ. ಆ ಸಮಸ್ಯೆ ಏನು ? ಅದರಿಂದ ಅಧ್ಯಕ್ಷ ಹೇಗೆ ಹೊರಬರುತ್ತಾನೆ ಎಂಬುದು ಚಿತ್ರದ ಕಥೆ.

    ಚಿತ್ರದ ಬಹುತೇಕ ಭಾಗವನ್ನು ವಾಷಿಂಗ್ಟನ್‌ನ ಸೀಟಲ್ ಸುತ್ತಮುತ್ತ ಚಿತ್ರಿಕರಿಸಲಾಗಿದೆ.ಚಿತ್ರದಲ್ಲಿ ಐದು ಹಾಡುಗಳು ಇದ್ದು , ಮೂರು ಹಾಡುಗಳನ್ನು ಅಮೇರಿಕಾದಲ್ಲಿ ಚಿತ್ರೀಕರಿಸಲಾಗಿದೆ.ಇದು ಮಲಯಾಳಂ `ಟು ಕಂಟ್ರೀಸ್' ಚಿತ್ರದ ರಿಮೇಕ್. 2014 ರಲ್ಲಿ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಅಧ್ಯಕ್ಷ' ಚಿತ್ರದ ಸಿಕ್ವೆಲ್ ಚಿತ್ರವಿದಾಗಿದ್ದು ಇದೇ ಮೊದಲ ಬಾರಿಗೆ ವಿ ಹರಿಕೃಷ್ಣ ಶರಣ್ ಚಿತ್ರವೊಂದಕ್ಕೆ ಸಂಗೀತ ನೀಡಲಿದ್ದಾರೆ.

    **Note:Hey! Would you like to share the story of the movie ಅಧ್ಯಕ್ಷ ಇನ್ ಅಮೇರಿಕಾ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X