X
ಕನ್ನಡ » ಚಲಚಿತ್ರಗಳು » ಅಧ್ಯಕ್ಷ ಇನ್ ಅಮೇರಿಕಾ
ಅಧ್ಯಕ್ಷ ಇನ್ ಅಮೇರಿಕಾ

ಅಧ್ಯಕ್ಷ ಇನ್ ಅಮೇರಿಕಾ

Comedy | 04 Oct 2019 |
Kannada

2.7 /5 Users

3.5 /5 Filmibeat

ಅಧ್ಯಕ್ಷ ಇನ್ ಅಮೇರಿಕಾ ಕಥೆ

ಹಿನ್ನಲೆ- ಯೋಗಾನಂದ ಮುದ್ದಾನ್ ನಿರ್ದೇಶಿಸಿರುವ `ಅಧ್ಯಕ್ಷ ಇನ್ ಅಮೇರಿಕಾ' ಚಿತ್ರದಲ್ಲಿ ಶರಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ.ಚಿತ್ರವನ್ನು ವಿಶ್ ಪ್ರಸಾದ್ ನಿರ್ಮಸಿದ್ದಾರೆ. ಅಮೇರಿಕಾದಲ್ಲಿ ಸುಮಾರು 40 ದಿನಗಳಿಗೂ ಹೆಚ್ಚು ಚಿತ್ರವನ್ನು ಚಿತ್ರೀಕರಿಸಲಾಗಿದೆ. 70 ಪ್ರತಿಶತ ಚಿತ್ರವನ್ನು ಅಮೇರಿಕಾದಲ್ಲಿ ಶೂಟಿಂಗ್ ಮಾಡಲಾಗಿದೆ. ಕಥೆ- ಚಿತ್ರದಲ್ಲಿ ನಾಯಕ ಹಣಕ್ಕಾಗಿ  ಜನರಿಗೆ ಚಿಕ್ಕಪುಟ್ಟ ಮೋಸಗಳನ್ನು ಮಾಡುತ್ತಾ ಬದುಕುತ್ತಿರುತ್ತಾನೆ. ಹಣಕ್ಕಾಗಿ ಏನು ಮಾಡಲು ರೆಡಿಯುರುವ ಇವನು ಹಣದ ಆಸೆಗೆ ಒಬ್ಬ ಶ್ರೀಮಂತನ ಅಂಗವಿಕಲ ತಂಗಿಯನ್ನು ಮದುವೆಯಾಗುವುದಾಗಿ ಮಾತು ಕೊಡುತ್ತಾನೆ. ಆದರೆ ಇದೇ ಸಮಯದಲ್ಲಿ ಅಮೇರಿಕಾದ ಶ್ರೀಮಂತ ಹುಡುಗಿಯಿಂದ ಇವನ ಮದುವೆಗೆ ಪ್ರೊಪೋಸಲ್ ಬರುತ್ತದೆ. ಇಲ್ಲಿನ ಮದುವೆ ಕ್ಯಾನ್ಸಲ್ ಮಾಡಿ ಅಮೇರಿಕಾಕ್ಕೆ ಹಾರುತ್ತಾನೆ. ಅಲ್ಲಿ ಹೋಗಿ ಅವಳನ್ನ ಮದುವೆಯಾಗುವ ಅವನಿಗೆ ಶಾಕಿಂಗ್ ಸತ್ಯ ಗೊತ್ತಾಗುತ್ತದೆ. ಅವಳು ಶ್ರೀಮಂತಳಾದರೂ ಅವಳ ಒಂದು ಸಮಸ್ಯೆ ಇವನಿಗೆ ನಯಾಪೈಸೆ ದೊರಕದ ಹಾಗೇ ಮಾಡುತ್ತೆ. ಆ ಸಮಸ್ಯೆ ಏನು ? ಅದರಿಂದ ಅಧ್ಯಕ್ಷ ಹೇಗೆ ಹೊರಬರುತ್ತಾನೆ ಎಂಬುದು ಚಿತ್ರದ ಕಥೆ. ಚಿತ್ರದ ಬಹುತೇಕ ಭಾಗವನ್ನು ವಾಷಿಂಗ್ಟನ್‌ನ ಸೀಟಲ್ ಸುತ್ತಮುತ್ತ ಚಿತ್ರಿಕರಿಸಲಾಗಿದೆ.ಚಿತ್ರದಲ್ಲಿ ಐದು ಹಾಡುಗಳು ಇದ್ದು , ಮೂರು ಹಾಡುಗಳನ್ನು ಅಮೇರಿಕಾದಲ್ಲಿ ಚಿತ್ರೀಕರಿಸಲಾಗಿದೆ.ಇದು ಮಲಯಾಳಂ `ಟು ಕಂಟ್ರೀಸ್' ಚಿತ್ರದ ರಿಮೇಕ್. 2014 ರಲ್ಲಿ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿದ್ದ `ಅಧ್ಯಕ್ಷ' ಚಿತ್ರದ ಸಿಕ್ವೆಲ್ ಚಿತ್ರವಿದಾಗಿದ್ದು ಇದೇ ಮೊದಲ ಬಾರಿಗೆ ವಿ ಹರಿಕೃಷ್ಣ ಶರಣ್ ಚಿತ್ರವೊಂದಕ್ಕೆ ಸಂಗೀತ ನೀಡಲಿದ್ದಾರೆ.
Read More

ಅಧ್ಯಕ್ಷ ಇನ್ ಅಮೇರಿಕಾ ಕಲಾವಿದರು ಮತ್ತು ಸಿಬ್ಬಂದಿ

ಅಧ್ಯಕ್ಷ ಇನ್ ಅಮೇರಿಕಾ ಕ್ರೂ ಮಾಹಿತಿ

ನಿರ್ದೇಶಕ ಯೋಗಾನಂದ ಮುದ್ದಾನ್
ಸಿನಿಮಾಟೋಗ್ರಫಿ NA
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ ವಿಶ್ವಪ್ರಸಾದ್ ಟಿ.ಜಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಧ್ಯಕ್ಷ ಇನ್ ಅಮೇರಿಕಾ ವಿಮರ್ಶಕರ ವಿಮರ್ಶೆ

kannada.asianetnews.com
ಬೇರೊಂದು ಭಾಷೆಯಿಂದ ರೀಮೇಕ್‌ ಮಾಡುವಂತಹ ಅದ್ಭುತ ಚಿತ್ರವಲ್ಲ ಇದು. ಆದರೂ, ಏನಾದರೂ ನಗುವಂತಿದ್ದರೆ ಅದು ಚಿತ್ರದ ನಿರ್ದೇಶಕ ಯೋಗಾನಂದ್‌ ಮುದ್ದಾನ್‌ ಬರೆದಿರುವ ಸಂಭಾಷಣೆಗಳು, ಶರಣ್‌ರ ಮ್ಯಾನರಿಸಂನಿಂದ ಮಾತ್ರ.
ವಿಜಯ ಕರ್ನಾಟಕ
ನಿರ್ದೇಶಕ ಯೋಗಾನಂದ್ ಮುದ್ದಾನ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರೂ, ಶರಣ್ ಅಭಿಮಾನಿಗಳಿಗೆ, ಅವರು ಸಿನಿಮಾಗಳ ಮೇಲೆ ನಿರೀಕ್ಷೆ ಇಟ್ಟುಕೊಂಡವರಿಗೆ ಏನು ಬೇಕು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದನ್ನೆಲ್ಲ ಚಿತ್ರದಲ್ಲಿ ಹದವಾಗಿ ಬೆರೆಸಿದ್ದಾರೆ.
balkaninews.com
ಮೊದಲ ಪ್ರಯತ್ನದಲ್ಲಿಯೇ ಯೋಗಾನಂದ್ ಮುದ್ದಾನ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಒಂದು ಸಲ ಥಿಯೇಟರ್ ನತ್ತ ಹೋದರೆ ಅಪರೂಪದ ಚಿತ್ರದ ನೋಡಿದ ಅನುಭವ, ಮನಸಾರೆ ನಕ್ಕು ಹಗುರಾದ ಖುಷಿ ಖಂಡಿತಾ ನಿಮ್ಮದಾಗುತ್ತದೆ.
tv5kannada.com
ಅಧ್ಯಕ್ಷ ಇನ್ ಅಮೇರಿಕಾ . ಇಡೀ ಕುಟುಂಬ ಸಮೇತರಾಗಿ ಕೂತು ಹೊಟ್ಟೆ ಹುಣ್ಣಾಗುವಷ್ಟು ನಗುವಂತಹ ಸಿನಿಮಾ. ಫಸ್ಟ್ ಹಾಫ್​ ಅದ್ದೂರಿಯಾಗಿದೆ. ಸೆಕೆಂಡ್​ ಹಾಫ್​ ಭರ್ಜರಿಯಾಗಿದೆ. ಸೋ.. ಟೋಟಲಿ ಅಧ್ಯಕ್ಷ ಇನ್ ಅಮೇರಿಕಾ ಒಂದು ರಿಫ್ರೆಶ್​ಮೆಂಟ್ ಸಿನಿಮಾ.
ಕನ್ನಡ ಫಿಲ್ಮೀಬೀಟ್ -ಅಧ್ಯಕ್ಷನ ಕಾಮಿಡಿ ಕಿಕ್
3.5

ಅಧ್ಯಕ್ಷ ಇನ್ ಅಮೇರಿಕಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಅಧ್ಯಕ್ಷ ಇನ್ ಅಮೇರಿಕಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+