X
ಅಲೈಕ್ಯಾ
Drama | Horror | 10 May 2024 | U/A |
Kannada

ಅಲೈಕ್ಯಾ ಕಥೆ

ಅಲೈಕ್ಯಾ ಸಿನಿಮಾವನ್ನು ಸಾತ್ವಿಕ್ ಭೂಪತಿ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದ್ದು, ದರ್ಶಿನಿ ಒಡೆಯರ್, ನಿಸರ್ಗ ಬಿ.ಎಸ್‌, ಜಾಹ್ನವಿ ವಿ, ಕಾವ್ಯ ಪಿ, ಮಾನ್ವೀರ್ ಚೌಹಾಣ್, ವಿವೇಕ್ ಚಕ್ರವರ್ತಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನ ಚಿತ್ರಕ್ಕಿದೆ. 

ಸಿನಿಮಾ ಕಥೆ: ಒಂದಷ್ಟು ಸ್ನೇಹಿತರು ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಬಳಿಕ ಅತಿಥಿಗೃಹವೊಂದರಲ್ಲಿ ಉಳಿದುಕೊಳ್ಳುತ್ತಾರೆ. ಈ ಸಂದರ್ಭ ಅನಿರೀಕ್ಷಿತವಾಗಿ ನಡೆದ ಕೆಲ ಘಟನೆಗಳಿಂದ ಆ ಗೆಸ್ಟ್‌ಹೌಸ್‌ನಲ್ಲಿ ಆತ್ಮಗಳಿರುವುದು ಗೊತ್ತಾಗಿ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅಂದ್ಹಾಗೆ, ಆ ಅತಿಥಿಗೃಹದಲ್ಲಿ ಅಮೂಲ್ಯ ವಜ್ರಗಳಿರುವುದು ತಿಳಿಯತ್ತೆ. ಈ ವಜ್ರಗಳಿಗೆ ಆತ್ನಗಳೆಲ್ಲಾ ಕಾವಲಾಗಿರುತ್ತವೆ. ಅದರಲ್ಲಿ ಒಂದು ಆತ್ಮ ಮಾತ್ರ ಅಲ್ಲಿಗೆ ತೆರಳಿದ್ದ ಸ್ನೇಹಿತರನ್ನು ಅಲ್ಲಿಂದ ಹೊರಕಳಿಸಲು ನೋಡಿದ್ರೆ, ಮತ್ತೊಂದು ಆತ್ಮ ಅಲ್ಲೇ ಇರುವಂತೆ ಪ್ರಯತ್ನಿಸುತ್ತದೆ. ಇವರಿಗೆ ನೆರವು ನೀಡುವ ಆ ಆತ್ಮದ ಸಹಾಯದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಂಡು ಹೊರಬರುತ್ತಾರೆ, ಅಷ್ಟಕ್ಕೂ ಅವರಿಗೂ, 21-21-21 ಸಂಖ್ಯೆಗೂ ಇರುವ ಸಂಬಂಧವೇನು ಎಂಬುದೇ ಅಲೈಕ್ಯಾ ಸಿನಿಮಾದ ಕಥೆ. 

ಬಿಡುಗಡೆ: ಅಲೈಕ್ಯಾ ಸಿನಿಮಾ 2024ರ ಮೇ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+