ಅಮರ್ಥ ಸಿನಿಮಾವನ್ನು ವಿನಯ್ ಪ್ರೀತಮ್ ಹಾಗೂ ಗುರು ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಹಾಗೂ ಮೇಘನಾ ರಾಜ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಯ್ಯ ಸದಾಶಿವ್ ಶೆಟ್ಟಿ ಮತ್ತು ಗುರು ಹೆಗಡೆ ಅವರೇ ನಿರ್ಮಾಣ ಮಾಡ್ತಿದ್ದಾರೆ.
ಪೋಸ್ಟರ್ ರಿಲೀಸ್: 2023ರ ಗಣೇಶ್ ಚತುರ್ಥಿಯಂದು ಅಮರ್ಥ ಸಿನಿಮಾದ ಫೋಸ್ಟರ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಮೇಘನಾ ರಾಜ್ ನೇರಳೆ ಬಣ್ಣ ಸೀರೆ, ತುರುಬಿಗೆ ಹೂ ಮುಡಿದು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಶರ್ಟ್, ಪಂಚೆ ಹಾಗೂ ಶಲ್ಯ ಧರಿಸಿದ್ದಾರೆ.