ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದ ಅಂಬಾರಿ ಚಿತ್ರದಲ್ಲಿ ಯೋಗೇಶ್ ಮತ್ತು ಸುಪ್ರೀತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಮತ್ತು ಎ.ಪಿ.ಅರ್ಜುನ್ ಬರಹದಲ್ಲಿ ಮೂಡಿಬಂದ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ನೀಡಿದರು. ಚಿತ್ರ ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಂಡು ಶತದಿನೋತ್ಸವ ಆಚರಿಸಿತು.
ಒಬ್ಬ ಯುವತಿಯ ಕಾಲನ್ನು ನೋಡಿ ಪ್ರೀತಿಸುವ ಒಬ್ಬ ಯುವಕ ಅವಳ ಆಸೆಯಂತೆ ಅವಳನ್ನು ಸೈಕಲ್ ಮೇಲೆ ತಾಜಮಹಲ್ ನೋಡಲು ಕರೆದೊಯ್ಯುತ್ತಾನೆ. ಕೆಲವು ದುಷ್ಕರ್ಮಿಗಳ ಚೂರಿಯ ಗಾಯದಿಂದ ನಾಯಕ ತಾಜ್ ಮಹಲ್ ಮುಂದೆಯೇ ಸಾವನ್ನಪ್ಪುತ್ತಾನೆ.