ಅಂಬರೀಶ ಕಥೆ

  ಅಂಬರೀಶ ಚಿತ್ರ ಆಕ್ಷನ್ ಮತ್ತು ರೋಮ್ಯಾನ್ಸ್ ಚಿತ್ರವಾಗಿ ದರ್ಶನ್, ರಚಿತ ರಾಮ್ ಮತ್ತು ಪ್ರಿಯಾಮಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಶರತ್ ಲೋಹಿತಾಶ್ವ, ಕೆಲ್ಲಿ ಡೊರ್ಜಿ, ವಿಶೇಷ ಪಾತ್ರದಲ್ಲಿ ಅಂಬರೀಶ್ ಮತ್ತು ಬುಲೆಟ್ ಪ್ರಕಾಶ್, ಸಾಧು ಕೋಕಿಲ ಅವರು ಅಭಿನಯಿಸಿದ್ದಾರೆ. 

  ಕಥೆ:

  ಅಂಖಬರೀಶ ಚಿತ್ರದಲ್ಲಿ ಹೊರಗಿನ ದೇಶದವರು ಇಲ್ಲಿನ ರಾಜಕಾರಣಿಯ ಮೂಲಕ  ಬೆಂಗಳೂರಿನಲ್ಲಿ ಭೂ ಮಾಫಿಯಾ ಮಾಡಲು ಬಂದಾಗ ಅವರನ್ನು ಹೆದುರಿಸಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡನ ರೂಪದಲ್ಲಿ (ಅಂಬರೀಶ್) ನಾಯಕ ದರ್ಶನ್ ಎಲ್ಲವನ್ನು ಕಾಪಾಡುವುದೇ ಚಿತ್ರದ ಮುಖ್ಯ ಸಾರಾಂಶ ವಾಗಿದೆ.
  ಹೊರಗಿನ ದೇಶದ ಆರ್.ಡಿ.ಎಕ್ಸ್.(ಡೆಲ್ಲಿ ಕೊರ್ಜಿ) ದೊಡ್ಡ ಭೂಗತ ಪಾತಕಿಯಾಗಿ ಬೆಂಗಳೂರಿನಲ್ಲಿ ಒಂದು ಕೆಸಿನೊವನ್ನು ನಿರ್ಮಿಸಲು ರಾಜಕಾರಣಿ ಶರತ್ ಲೋಹಿತಾಶ್ವ ನ ಮೂಲಕ ಕಬಳಿಸಲು ಹೊಂಚು ರೂಪಿಸಿರುತ್ತನೆ.
  ಸರ್ಕಾರದ ಮೂಲಕ 1000 ಎಕರೆ ಜಮೀನನ್ನು ವಿಸ್ತಿರಣಗೊಳಿಸಿ ನಂತರ ಬೆಂಗಳೂರಿನಲ್ಲೇ ದೊಡ್ಡ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಪ್ರಿಯಮಣಿ ಅವರ ಮೂಲಕ ಬೆಂಗಳೂರಿನಲ್ಲಿ ಜಾಗವನ್ನು ಪಡೆದುಕೊಂಡು ಕೆಸಿನೊ ರೂಪಿಸಲು ಸಿದ್ದರಾಗುತ್ತಾರೆ.

  ಆದರೆ ಈ ಪ್ರಯತ್ನಕ್ಕೆ ತೆರೆ ಎಳೆಯುವುದೇ ನಾಯಕ ದರ್ಶನ್. ಕೆಂಪೇಗೌಡನ ರೂಪದಲ್ಲಿ ಕಾಣಿಸಿಕೊಳ್ಳುವ ಅಂಬರೀಶ್ ನಾಯಕ ದರ್ಶನ್ ರೂಪದಲ್ಲಿ ಬಂದು ಭೂ ಪಾತಕಿಯಾಗಿ ಇಡೀ ಬೆಂಗಳೂರಿನ ರೌಡಿಗಳನ್ನೂ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತಿರುವ ಹೊರ ದೇಶದ  ಆರ್.ಡಿ.ಎಕ್ಸ್.(ಡೆಲ್ಲಿ ಕೊರ್ಜಿ)ಯನ್ನು ನಿರ್ನಾಮ ಮಾಡಿ ಬೆಂಗಳೂರನ್ನು ಒಂದು ಮಾದರಿ ರೂಪದಲ್ಲಿ ಕಾಣಿಸುವುದೇ ನಾಯಕ ದರ್ಶನ್ ನ ಮುಖ್ಯ ಪಾತ್ರವಾಗಿ ಹೊರ ಹೊಮ್ಮಿದೆ.

  ಪ್ರಿಯಮಣಿ ಅವರು ಹಿಯಾಳುಸುತ್ತಿದ ಮಾತಗಳು ಒಬ್ಬ ಕೂಲಿ ಕೆಲಸದವನು ಏನನ್ನು ಮಾಡಕ್ಕೆ ಆಗುವುದಿಲ್ಲ ಎಂಬುದು ನಾಯಕ ದರ್ಶನ್ ಅವರ ಮನಸ್ಸಿಗ್ಗೆ ನಾಟಿ, ಅವರ ಮೇಲೆ ದ್ವೇಷಿಸಿ ಬೆಂಗಳೂರಿನಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿ ಒಬ್ಬ ಕೂಲಿ ಕೆಲಸಗಾರ ಮನಸ್ಸು ಮಾಡಿದರೆ ಏನೆಲ್ಲವನ್ನು ಮಾಡಬಹುದು ಎಂಬುದನ್ನು ಚಿತ್ರದಲ್ಲಿ ಬಹಳ ಸುಂದರವಾಗಿ ನಿರೂಪಿಸಿಲಾಗಿದೆ.

  ಇನ್ನು ಚಿತ್ರದ ನಾಯಕಿ ರಚಿತರಾಮ್ ನಾಯಕ ದರ್ಶನ್ ಪ್ರೀತಿಯ ಬಲೆಗೆ ಬಿದ್ದಿರುತ್ತಾರೆ. ನಾಯಕಿ ರಚಿತರಾಮ್ ಅವರು ಕರಿದಿಸಿದ ಪಾರಿವಾಳವನ್ನು ತನೆಗೆಬೇಕೆಂದು ಪ್ರಿಯಮಣಿ, ಮತ್ತು ಇಬ್ಬರಿಗೂ ಒಂದು ನೈಜ ರೂಪದಲ್ಲಿ ಮುನಿಸಿಕೊಳ್ಳುವುದೇ ಮುಖ್ಯ ಸನ್ನಿವೆಶವಾಗಿ ತೆರೆಯ ಮೇಲೆ ಇಬ್ಬರು ನಾಯಕಿಯರನ್ನು ಒಟ್ಟಿಗೆ ಪರಿಚಯಿಸಿದ್ದಾರೆ ನಿರ್ದೇಶಕ ಮಹೇಶ್ ಸುಧಕರೆ. ಇವರಿಬ್ಬರ ಪ್ರೀತಿಗೆ ತೆರೆ ಎಳೆಯಲು ಪ್ರಿಯಮಣಿ ಹೂಡಿದ ಸಂಚು ತ್ರುಪ್ತಿಕರವಾಗದೆ ಸುಮ್ಮನಾಗುತ್ತಾರೆ.

  ಇನ್ನು ಚಿತ್ರದಲ್ಲಿ ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಹಾಸ್ಯ ಚಟಾಕಿಯನ್ನು ಬಹಳ ಸುಂದರವಾಗಿ ಜನರ ಮನಸನ್ನು ಗಳಿಸುವಲ್ಲಿ ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿದ್ದಾರೆ. ಚಿತ್ರದ ಉದ್ದಕ್ಕೂ ನಡೆಯುವ ಮಾತಿನ ಸಂಭಾಷಣೆ, ನಾಯಕನ ಡೈಲಾಕ್ ಗಳು ಸ್ವಲ್ಪ ಮಟ್ಟಿಗೆ ತೃಪ್ತಿ ಎನಿಸಿವೆ. ಚಿತ್ರದಲ್ಲಿ ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಸರಿಸಮವಾಗಿ ಹರಿದಾಡಿದೆ. ಚಿತ್ರವು ಎಷ್ಟರ ಮಟ್ಟಿಗೆ ಜನರ ಮನಸನ್ನು ಗಳಿಸುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

  ನಿರ್ದೇಶಕ ಮಹೇಶ್ ಸುಖಧಾರೆ ಮತ್ತು ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿ ಮುಡಿ ಬಂದಿದ್ದೆ.
  **Note:Hey! Would you like to share the story of the movie ಅಂಬರೀಶ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X