ಅನರ್ಥ ಸಿನಿಮಾವನ್ನು ರಮೇಶ್ ಕೃಷ್ಣ ನೀನಾಸಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಶಾಲ್ ಮಣ್ಣೂರು, ವಿಹಾನಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಸಿ. ವಿಜಯ್ ಕುಮಾರ್, ಗಣೇಶ್, ರಕ್ಷಿತ್, ಪ್ರಸನ್ನ ಬಾಗೀನ, ಅರ್ಪಿತಾ ಮುಂತಾದವರು ತಾರಾಗಣದಲ್ಲಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ ಹಾಗು ನಾಗವರ ಛಾಯಾಗ್ರಹಣ ಚಿತ್ರಕ್ಕಿದೆ. ಕುಂಗ್ ಫೂ ಚಂದ್ರು ಅವರ ಸಾಹಸ ನಿರ್ದೇಶನ ದ ಜೊತೆಗೆ ನಿಷಿತ್ ಪೂಜಾರಿ ಹಾಗೂ ವಿನಯ್ ಸಂಕಲನ ಸಿನಿಮಾಗಿದೆ. ಶ್ರೀಧರ್ ಎನ್.ಸಿ. ಹೊಸಮನೆ ಅವರು 'ತೇಜಸ್ ಸಿನಿ ಕ್ರಿಯೇಶನ್ಸ್' ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ.