Updated: Thursday, January 9, 2020, 09:53 AM [IST]
ನಾಯಕ ನಾಯಕಿಯರೇ ಚಿತ್ರದ ಜೀವಾಳವಾದರೂ, ಕೆಲವು ಪೋಷಕ ಕಲಾವಿದರು ಕೂಡ ಗಮನ ಸೆಳೆಯುತ್ತಾರೆ. ಅದರಲ್ಲೂ ಬಾಲಕಲಾವಿದರು ಚಿತ್ರಕ್ಕೊಂದು ಅಂದ ನೀಡುತ್ತಾರೆ. ಮೊದಲು ಕನ್ನಡದಲ್ಲಿ ಕೆಲವು ನಿರ್ಮಾಪಕರು ಬಾಲ ಕಲಾವಿದರಿಗಾಗಿಯೇ ಚಿತ್ರಗಳ ತಯಾರಿಸುತ್ತಿದ್ದರು. ಈಗ ಮಕ್ಕಳ ಚಿತ್ರಗಳು ಅಪರೂಪ. ಕನ್ನಡ ಚಿತ್ರರಂಗದಲ್ಲಿ ಬಾಲಕಲಾವಿದರಾಗಿ ಹೆಸರು ಗಳಿಸಿದ ಕೆಲವು ಪ್ರಮುಖ ನಟ-ನಟಿಯರನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ಪುನೀತ್ ರಾಜಕುಮಾರ್, ಮಾಸ್ಟರ್ ಮಂಜುನಾಥ, ವಿಜಯ ರಾಘವೇಂದ್ರ ಮತ್ತು ಶ್ಯಾಮಿಲಿ ಬಾಲ ಕಲಾವಿದರಾಗಿ ರಾಷ್ಟಪ್ರಶಸ್ತಿ ಕೂಡ ಪಡೆದಿದ್ದಾರೆ.
ಆಕ್ಸನ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಅರ್ಜುನ್ ಸರ್ಜಾ ರಾಜೇಂದ್ರ ಸಿಂಗ್ ಬಾಬುರವರ ನಿರ್ದೇಶನದಲ್ಲಿ ಮೂಡಿಬಂದ ಮಕ್ಕಳ ಚಿತ್ರ ಸಿಂಹದ ಮರಿ ಸೈನ್ಯದಲ್ಲಿ ಬಾಲ ಕಲಾವಿದರಾಗಿ ನಟಿಸಿದ್ದರು. ಚಿತ್ರದಲ್ಲಿ ಅರ್ಜುನ್ 500 ಅಡಿ ಎತ್ತರ್ ಹೆಲಿಕಾಪ್ಟರ್ ಗೆ ಜೋತುಬಿದ್ದು ಮಾಡಿದ ಫೈಟ್ ಪ್ರಸಿದ್ಢವಾಗಿತ್ತು.
Famous Kannada Child Actors and Actress-Arjun Sarja/top-listing/famous-kannada-child-actors-and-actress-arjun-sarja-3-1255-110.html
ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮುನ್ನ ಸುಧಾರಾಣಿ ಕಿಟ್ಟು ಪುಟ್ಟು ,ಕುಳ್ಳ-ಕುಳ್ಳಿ ಚಿತ್ರಗಳಲ್ಲಿ ಬೇಬಿ ಜಯಶ್ರೀ ಹೆಸರಿನೊಂದಿಗೆ ನಟಿಸಿದ್ದರು. ಭರತನಾಟ್ಯ ಪ್ರವೀಣೆಯಾಗಿದ್ದ ಸುದಾರಾಣಿ ಆಗ ಎರಡನೇ ತರಗತಿಯಲ್ಲಿ ಓದುತ್ತಿದ್ದರು.
Famous Kannada Child Actors and Actress-Sudharani/top-listing/famous-kannada-child-actors-and-actress-sudharani-3-1256-110.html
ಪುನೀತ್ ರಾಜಕುಮಾರ್ ಬಾಲನಟನಾಗಿ ಸುಮಾರು 14 ಚಿತ್ರಗಳಲ್ಲಿ ನಟಿಸಿದ್ದಾರೆ. ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ ,ಬೆಟ್ಟದ ಹೂವು ಮುಂತಾದ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿರುವ ಪುನೀತ್ ತಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.
Famous Kannada Child Actors and Actress-Puneeth Rajkumar/top-listing/famous-kannada-child-actors-and-actress-puneeth-rajkumar-3-1257-110.html