ಸೊನಗಹಳ್ಳಿ ರಾಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಆನೆಬಲ ಚಿತ್ರದಲ್ಲಿ ಸಾಗರ್ ಮತ್ತು ರಕ್ಷಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜನತಾ ಟಾಕೀಸ್ ಸಂಸ್ಥೆ ಮೂಲಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್ ಮತ್ತು ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.
ಮಂಡ್ಯ ಭಾಗದ ಹಳ್ಳಿ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ 'ಆನೆಬಲ' ಚಿತ್ರದಲ್ಲಿ ರಾಗಿ ಮತ್ತು ರಾಗಿ ಮುದ್ದೆಯ ಮಹತ್ವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಾಗಿ ಮುದ್ದೆ ಊಟದ ಸ್ಪರ್ಧೆಯೇ ಸಿನಿಮಾದ ಪ್ರಮುಖ ಅಂಶವಾಗಿದೆ. ಒಂದು ಬಾರಿ ಇದರಿಂದ ಆಗುವ ಎಡವಟ್ಟನ್ನು ನಾಯಕ ಹೇಗೆ ಬಗೆ ಹರಿಸುತ್ತಾನೆ ಎನ್ನುವುದೇ ಸಿನಿಮಾದ ಕಥೆಯಾಗಿದೆ.