ಅಂಶು ಸಿನಿಮಾವನ್ನು ಎಂ ಸಿ ಚೆನ್ನಕೇಶವ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಕೆ.ಸಿ ಬಾಲರಂಗನ್ ಸಂಗೀತ, ಸುನೀಲ್ ನರಸಿಂಹ ಛಾಯಾಗ್ರಹಣ ಸಿನಿಮಾಗಿದೆ. ಗ್ರಹಣ ಎಲ್‌ಎಲ್‌ಪಿ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.