ಅನುಕ್ತ ಕಥೆ

  ಕ್ರೈಮ್ ಥ್ರಿಲ್ಲರ್ ಕಥಾನಕವುಳ್ಳ `ಅನುಕ್ತ' ಚಿತ್ರದಲ್ಲಿ ಸಂಪತ್‌ ರಾಜ್ ಮತ್ತು ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಗೀತಾ ಭಟ್,ಕಾರ್ತಿಕ್ ಅತ್ತಾವರ್,ಕೆ.ಎಸ್.ಶ್ರೀಧರ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

  ಅಶ್ವತ್ ಸ್ಯಾಮುವೆಲ್ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಹರೀಶ್ ಬಂಗೇರಾ ``ಧೇಯಿ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಿಸಿದ್ದಾರೆ. ನೋಬಿನ್ ಪಾಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

  ಜನೇವರಿ 18,2019 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಫೆಬ್ರವರಿ 1 ರಂದು ಚಿತ್ರ ಬಿಡುಗಡೆಯಾಗುವ ಸಂಭವವಿದೆ.ಕರ್ನಾಟಕದ ಕರಾವಳಿ ಭಾಗದಲ್ಲಿ ನೆಡೆಯುವ ಒಂದು ಕೊಲೆಯ ಸುತ್ತ ಚಿತ್ರ ಸುತ್ತುತ್ತದೆ. ತುಳುನಾಡಿನ `ದೈವಕೊಳ' ಸಂಸ್ಕೃತಿ ಚಿತ್ರದಲ್ಲಿ ಪ್ರಮುಖ ಭಾಗವಹಿಸುತ್ತದೆ.  ಮನುಷ್ಯನ ಭಾವನೆಗಳು ಕನಾಸಾಗಿ ಕಾಡುವ ಮತ್ತು ಒಂದು ಕೊಲೆಯ ಮನೋವೈಜ್ಞಾನಿಕ ಆಯಾಯಗಳನ್ನು ಚಿತ್ರ ವಿಶ್ಲೇಷಿಸುತ್ತದೆ.

  ಒಂದು ಕೊಲೆಯ ತನಿಖೆಗೆ ಬಂದ ಸಿಸಿಬಿ ಆಫೀಸರ್ (ಕಾರ್ತಿಕ್) ಗೆ ಇನ್ನೊಂದು ಕೊಲೆ ಎದುರಾಗುತ್ತೆ. ಆ ಕೊಲೆಗೂ ಸ್ವತಃ ತನಿಖೆ ನಡೆಸಲು ಬಂದ ಆಫೀಸರ್ ಗೂ ಸಂಬಂಧವಿರುತ್ತೆ. ಅದನ್ನ ಗಂಭೀರವಾಗಿ ತೆಗೆದುಕೊಳ್ಳುವ ಕಾರ್ತಿಕ್ ಅದನ್ನ ಹೇಗೆ ಭೇದಿಸುತ್ತಾನೆ ಎಂಬುದು ಚಿತ್ರದ ಮೂಲ ಕಥೆ.

  **Note:Hey! Would you like to share the story of the movie ಅನುಕ್ತ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X