ಅಥಿ ಐ ಲವ್ ಯು ಸಿನಿಮಾವನ್ನು ಲೋಕೇಂದ್ರ ಸೂರ್ಯ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಶ್ರಾವ್ಯ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕತೆಯೇ ಅಥಿ ಐ ಲವ್ ಯು. ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಬರೋಬ್ಬರಿ 11 ನಿಮಿಷಗಳ ದೃಶ್ಯವನ್ನು ಸಿಂಗಲ್ ಶಾಟ್‌ನಲ್ಲಿ ಕಂಫೋಸ್ ಮಾಡಲಾಗಿದೆ.
ಈ ಚಿತ್ರವನ್ನು ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸೆವೆನ್ ರಾಜ್ ನಿರ್ಮಾಣ ಮಾಡಿದ್ದಾರೆ. ಅನಂತ್ ಆರ್ಯನ್ ಸಂಗೀತ ನಿರ್ದೇಶನ, ಯುಡಿವಿ ವೆಂಕಿ ಸಂಕಲನ ಸಿನಿಮಾಗಿದೆ.