twitter

    ಅವನೇ ಶ್ರೀಮನ್ನಾರಾಯಣ ಕಥೆ

    ಚಿತ್ರದ ಚಿತ್ರೀಕರಣ 2018,ಮಾರ್ಚ್ 15 ರಂದು ಆರಂಭವಾಯಿತು.ಸುಮಾರು 400 ದಿನಗಳ ಕಾಲ ಚಿತ್ರದ ಸ್ರ್ಕಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದ ಚಿತ್ರತಂಡ ಚಿತ್ರದಲ್ಲಿ ಬರುವ ಕಾಡಿನ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿತು. ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಕನ್ನಡ ಅತಿ ಹೆಚ್ಚಿನ ಬಜೆಟ್ ಚಿತ್ರಗಳಲ್ಲೊಂದಾದ ಈ ಚಿತ್ರವನ್ನು ಸುಮಾರು 198 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರಕ್ಕಾಗಿ 335 ಕಾಲ್ ಶೀಟ್ ಪಡೆಯಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಲ್ ಶೀಟ್ ಪಡೆದ ಚಿತ್ರವಾಗಿದೆ. ಬಾಹುಬಲಿ ಎರಡು ಭಾಗಗಳ ಚಿತ್ರೀಕರಣಕ್ಕಾಗಿ ಸುಮಾರು 700 ಕಾಲ್ ಶೀಟ್ ಪಡೆಯಲಾಗಿತ್ತು.

    ಚಿತ್ರದ ಕತೆ ಅಮರಾವತಿ ಎಂಬ ಪಟ್ಟಣದಲ್ಲಿ ತೆರೆದುಕೊಳ್ಳುತ್ತದೆ. ಎರಡು ದರೋಡೆಕೋರರ ಗುಂಪು ನಿಧಿಯ ಹುಡುಕಾಟದಲ್ಲಿ ತೊಡುಗುತ್ತದೆ. ಇವರಿಬ್ಬರಿಗೆ ಚಳ್ಳಹಣ್ಣು ತಿನ್ನಿಸಿ, ತನ್ನ ವಿಭಿನ್ನ ಶೈಲಿಯ ಮೂಲಕ ಇವರನ್ನು ಬೇಟೆಯಾಡಲು ಬಯಸುವ ಪೋಲಿಸ್ ಅಧಿಕಾರಿ ನಾರಾಯಣ...ಈ ಮೂವರ ಮಧ್ಯದ ಕಣ್ಣಾಮುಚ್ಚಾಲೆ ಆಟ ಶ್ರೀಮನ್ನಾರಾಯಣನ ಲೀಲೆ..

    ಸಚಿನ್ ರವಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯತ ಕುಮಾರ್,ಪ್ರಮೋದ್ ಶೆಟ್ಟಿ, ಬಾಲಜಿ ಮನೋಹರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

    ಪರವಃ ಸ್ಟುಡಿಯೋ ಚಿತ್ರವನ್ನು ನಿರ್ಮಸುತ್ತಿದ್ದು ರಕ್ಷಿತ್ ಶೆಟ್ಟಿ, ಪುಷ್ಕರ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಚರಣರಾಜ್ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ.ಚಿತ್ರದ ಫರ್ಸ್ಟ ಲುಕ್ ಮತ್ತು  ಎರಡನೇ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಜೂನ್ 6,2019 ರಂದು ಬಿಡುಗಡೆಯಾಯಿತು.

    2021 ರಲ್ಲಿ ಜರುಗಿದ 67 ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ಸ್ಟಂಟ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
    **Note:Hey! Would you like to share the story of the movie ಅವನೇ ಶ್ರೀಮನ್ನಾರಾಯಣ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X