X
ಕನ್ನಡ » ಚಲಚಿತ್ರಗಳು » ಅವನೇ ಶ್ರೀಮನ್ನಾರಾಯಣ
ಅವನೇ  ಶ್ರೀಮನ್ನಾರಾಯಣ

ಅವನೇ ಶ್ರೀಮನ್ನಾರಾಯಣ

Adventure | Comedy | Fantasy | 27 Dec 2019 | U/A | 186 Mins
Kannada

2.5 /5 Users

3.5 /5 Filmibeat

ಅವನೇ ಶ್ರೀಮನ್ನಾರಾಯಣ ಕಥೆ

ಚಿತ್ರದ ಚಿತ್ರೀಕರಣ 2018,ಮಾರ್ಚ್ 15 ರಂದು ಆರಂಭವಾಯಿತು.ಸುಮಾರು 400 ದಿನಗಳ ಕಾಲ ಚಿತ್ರದ ಸ್ರ್ಕಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದ ಚಿತ್ರತಂಡ ಚಿತ್ರದಲ್ಲಿ ಬರುವ ಕಾಡಿನ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿತು. ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಕನ್ನಡ ಅತಿ ಹೆಚ್ಚಿನ ಬಜೆಟ್ ಚಿತ್ರಗಳಲ್ಲೊಂದಾದ ಈ ಚಿತ್ರವನ್ನು ಸುಮಾರು 198 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರಕ್ಕಾಗಿ 335 ಕಾಲ್ ಶೀಟ್ ಪಡೆಯಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಾಲ್ ಶೀಟ್ ಪಡೆದ ಚಿತ್ರವಾಗಿದೆ. ಬಾಹುಬಲಿ ಎರಡು ಭಾಗಗಳ ಚಿತ್ರೀಕರಣಕ್ಕಾಗಿ ಸುಮಾರು 700 ಕಾಲ್ ಶೀಟ್ ಪಡೆಯಲಾಗಿತ್ತು. ಚಿತ್ರದ ಕತೆ ಅಮರಾವತಿ ಎಂಬ ಪಟ್ಟಣದಲ್ಲಿ ತೆರೆದುಕೊಳ್ಳುತ್ತದೆ. ಎರಡು ದರೋಡೆಕೋರರ ಗುಂಪು ನಿಧಿಯ ಹುಡುಕಾಟದಲ್ಲಿ ತೊಡುಗುತ್ತದೆ. ಇವರಿಬ್ಬರಿಗೆ ಚಳ್ಳಹಣ್ಣು ತಿನ್ನಿಸಿ, ತನ್ನ ವಿಭಿನ್ನ ಶೈಲಿಯ ಮೂಲಕ ಇವರನ್ನು ಬೇಟೆಯಾಡಲು ಬಯಸುವ ಪೋಲಿಸ್ ಅಧಿಕಾರಿ ನಾರಾಯಣ...ಈ ಮೂವರ ಮಧ್ಯದ ಕಣ್ಣಾಮುಚ್ಚಾಲೆ ಆಟ ಶ್ರೀಮನ್ನಾರಾಯಣನ ಲೀಲೆ.. ಸಚಿನ್ ರವಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯತ ಕುಮಾರ್,ಪ್ರಮೋದ್ ಶೆಟ್ಟಿ, ಬಾಲಜಿ ಮನೋಹರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪರವಃ ಸ್ಟುಡಿಯೋ ಚಿತ್ರವನ್ನು ನಿರ್ಮಸುತ್ತಿದ್ದು ರಕ್ಷಿತ್ ಶೆಟ್ಟಿ, ಪುಷ್ಕರ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಚರಣರಾಜ್ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ.ಚಿತ್ರದ ಫರ್ಸ್ಟ ಲುಕ್ ಮತ್ತು  ಎರಡನೇ ಟೀಸರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಜೂನ್ 6,2019 ರಂದು ಬಿಡುಗಡೆಯಾಯಿತು. 2021 ರಲ್ಲಿ ಜರುಗಿದ 67 ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ಸ್ಟಂಟ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
Read More

ಅವನೇ ಶ್ರೀಮನ್ನಾರಾಯಣ ಕಲಾವಿದರು ಮತ್ತು ಸಿಬ್ಬಂದಿ

ಅವನೇ ಶ್ರೀಮನ್ನಾರಾಯಣ ಕ್ರೂ ಮಾಹಿತಿ

ನಿರ್ದೇಶಕ ಸಚಿನ್ ರವಿ
ಸಿನಿಮಾಟೋಗ್ರಫಿ ಕರ್ಮ ಚಾವ್ಲಾ
ಸಂಪಾದಕ NA
ಸಂಗೀತ ಚರಣ್ ರಾಜ್ , ಬಿ ಅಜನೀಶ್ ಲೋಕನಾಥ್
ನಿರ್ಮಾಪಕ H K ಪ್ರಕಾಶ್, ಪುಷ್ಕರ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅವನೇ ಶ್ರೀಮನ್ನಾರಾಯಣ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್:ದುಷ್ಟಕೂಟದ ನಡುವೆ ನಾರಾಯಣನ ವಿನೋದ ಲೀಲೆ
ಹೊಸ ಶೈಲಿಯ ನಿರೂಪಣೆಗೆ ಸಾಮಾನ್ಯ ಪ್ರೇಕ್ಷಕರು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇರುವಾಗ ಮೂರು ತಾಸು ಪ್ರಯೋಗಕ್ಕೆ ಒಳಪಡುವುದು ಕಷ್ಟದ ಕಾರ್ಯ. ಸಿನೆಮಾದ ದೃಶ್ಯ ಪ್ರಸ್ತುತಿ ಆಡಂಬರ ಹಾಗು ಅಚ್ಚರಿಗಳ ಸಮೇತ ನಮಗೆ ವಿಶೇಷ ಅನುಭೂತಿಯನ್ನು ಒದಗಿಸುತ್ತದೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಅದ್ಭುತ. ಕುಟುಂಬ ಸಮೇತರಾಗಿ ನೋಡುವ ಕಂಟೆಂಟ್ ಇರುವುದು ಸಿನೆಮಾದ ಮತ್ತೊಂದು ಹೆಚ್ಚುಗಾರಿಕೆ.
ಕನ್ನಡ ಫಿಲ್ಮೀಬೀಟ್:ದೃಶ್ಯ ವೈಭವ, ಸಂಗೀತದ ಸೊಬಗು
'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಕ್ಷಿತ್ ಶೆಟ್ಟಿ ಮತ್ತು ತಂಡದ ಮೂರು ವರ್ಷದ ಪರಿಶ್ರಮ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ದೊಡ್ಡ ಪ್ರಯತ್ನ. ಕಥೆ ಇನ್ನಷ್ಟು ಕುತೂಹಲಕಾರಿಯಾಗಿ ಇರಬೇಕಾಗಿತ್ತು ಅನಿಸುತ್ತದೆ. ಕೆಲವು ಅಂಶಗಳು ಬಿಟ್ಟು ನೋಡಿದರೆ, ಸಿನಿಮಾ ತುಂಬ ಚೆನ್ನಾಗಿದೆ. ಮೇಕಿಂಗ್ ನಲ್ಲಿ ಅವನೇ ಶ್ರೀಮನ್ನಾರಾಯಣ ಹೊಸ ಅಧ್ಯಾಯ ಬರೆದಿದ್ದಾರೆ.

ಅವನೇ ಶ್ರೀಮನ್ನಾರಾಯಣ ಟ್ರೇಲರ್

Video Thumbnail

ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅವನೇ ಶ್ರೀಮನ್ನಾರಾಯಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+