ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಸಿನಿಮಾದ 2ನೇ ಭಾಗ ಅವತಾರ್ ಪುರುಷ 2. ಚಿತ್ರದಲ್ಲಿ
ಶರಣ್ ನಾಯಕ ನಟನಾಗಿ ಅಭಿನಯಿಸಿದ್ದರೆ,
ಶ್ರೀನಗರ ಕಿಟ್ಟಿ ಖಳನಾಯಕನಾಗಿ ಹಾಗೂ
ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಬಾಲಾಜಿ ಮನೋಹರ್, ಸುಧಾರಾಣಿ, ಸಾಧು ಕೋಕಿಲ ಸೇರಿದಂತೆ ಇನ್ನೂ ಮುಂತಾದ ಪ್ರತಿಭಾವಂತ ಕಲಾವಿದರಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕಥೆ: ಈ ಸಿನಿಮಾದ ಮೊದಲ ಭಾಗದಲ್ಲಿ ಕಥಾನಾಯಕ ಅನಿಲ್ (ಶರಣ್) ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್. ಸ್ಟಾರ್ ಹೀರೋ ಆಗಬೇಕೆಂಬ ಕನಸಿರುವ ಅವನಿಗೆ ಸಿಗುವುದು ಮಾತ್ರ ಸಣ್ಣ ಪಾತ್ರಗಳು. ಹೀಗಿರುವಾಗ ಆತನಿಗೆ ನಿಜ ಜೀವನದಲ್ಲಿ ಒಂದು ತಾಯಿಗೆ ಮಗನಾಗಿ ನಟಿಸಬೇಕೆಂಬ ಆಡಿಷನ್ ಬರುತ್ತದೆ. ಈ ಆಡಿಷನ್ ಮಾಡೋದು ಸಿರಿ (ಆಶಿಕಾ). ನಂತರ ಸಿನಿಮಾದ ಕಥೆ ಸಿರಿಯ ಅಜ್ಜನ ಮನೆಯಲ್ಲೇ ನಡೆಯುತ್ತೆ.
ಮತ್ತೊಂದು ಟ್ರ್ಯಾಕ್ನಲ್ಲಿ ಸಾಗುವ ತಂತ್ರ-ಮಂತ್ರಗಳ ಕಥೆಗೂ ಸಿರಿಯ ಅಜ್ಜನ ಮನೆಯ ಮೇಲೆ ಕಣ್ಣು. ಅಷ್ಟಕ್ಕೂ ಅನಿಲ್ ಈ ಮನೆಗೆ ಬಂದಿದ್ದು ಕಾಕತಾಳಿಯವೋ ಅಥವಾ ಇದರ ಹಿಂದೆ ಉದ್ದೇಶ ಇತ್ತೋ? ಅವನ ನಿಜವಾದ ಮುಖ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಕ್ಕಿತ್ತು. ಇದರ ಮುಂದಿನ ಭಾಗವಾಗಿ ಅವತಾರ ಪುರುಷ 2 ಬರುತ್ತಿದೆ.
ಬಿಡುಗಡೆ: ಅವತಾರ್ ಪುರುಷ 2 ಸಿನಿಮಾ 2024ರ ಏಪ್ರಿಲ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.