twitter

    ಬ್ಯಾಚುಲರ್ ಪಾರ್ಟಿ ಕಥೆ

    'ಬ್ಯಾಚುಲರ್ ಪಾರ್ಟಿ' ಸಿನಿಮಾವನ್ನು ಅಭಿಜಿತ್ ಮಹೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಿರಿ ರವಿಕುಮಾರ್, ಅಚರ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

    ಅರ್ಜುನ್ ರಾಮು ಸಂಗೀತ, ಅರವಿಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಪರವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

    ಬೆಳವಣಿಗೆ: ಈ ಸಿನಿಮಾದಲ್ಲಿ ಮೊದಲು ರಿಷಬ್ ಶೆಟ್ಟಿ ನಟಿಸುತ್ತಿದ್ದರು. ಆದರೆ, ಅವರು ಕಾಂತಾರ ಪ್ರಿಕ್ವೇಲ್ ಸಿನಿಮಾದ ವಿವಿಧ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಬ್ಯಾಚುಲರ್ ಪಾರ್ಟಿ ತಂಡದಿಂದ ಹೊರಬಂದಿದ್ದು, ನಟ ಲೂಸ್ ಮಾದ ಯೋಗೇಶ್ ರಿಷಬ್ ಬದಲಿಗೆ ಈ ತಂಡ ಸೇರಿಕೊಂಡರು. 

    ಬಿಡುಗಡೆ: 'ಬ್ಯಾಚುಲರ್ ಪಾರ್ಟಿ' ಸಿನಿಮಾ 2024ರ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 

    ಕಥೆ: ದಿಗಂತ್ ಪಾತ್ರದಿಂದಲೇ 'ಬ್ಯಾಚುಲರ್ ಪಾರ್ಟಿ'ಗಳ ಕಥೆ ಆರಂಭ ಆಗುತ್ತೆ. ದಿಗಂತ್ ಅಲಿಯಾಸ್ ಸಂತೋಷ್ ಒಬ್ಬ ಸಾಪ್ಟ್‌ವೇರ್ ಇಂಜಿನಿಯರ್. ಜೀವನದಲ್ಲಿ ಜಿಗುಪ್ಸೆ ಬರುವ ಹಂತದಲ್ಲಿರೋ ವ್ಯಕ್ತಿ. ಇಎಂಐ, ಕಮಿಟ್‌ಮೆಂಟ್ ಅಂತ ಬೇಸತ್ತು ಹೋಗಿರುವ ಸಂತೋಷ್‌ಗೆ ಒಂದೊಳ್ಳೆ ಜೀವನ ಸಾಗಿಸಬೇಕು ಅನ್ನೋ ಆಸೆ. ಇತ್ತ ವೈವಾಹಿಕ ಬದುಕು ಕೂಡ ಚೆನ್ನಾಗಿಲ್ಲ. ಸಂತೋಷ್ ಪತ್ನಿಯ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ದಿಗಂತ್ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಹದಗೆಟ್ಟಿದೆ. ಹೀಗೊಮ್ಮೆ ಗೆಳೆಯ ಬ್ಯಾಚುಲರ್ ಪಾರ್ಟಿಗೆ ಹೋಗಿ ಅದು ಮುಗಿಯೋ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಇರುತ್ತಾರೆ. ಅಲ್ಲಿ ಏನೇನಾಗುತ್ತೆ? ಅನ್ನೋದೇ ಕಥೆ.  




    **Note:Hey! Would you like to share the story of the movie ಬ್ಯಾಚುಲರ್ ಪಾರ್ಟಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X