ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದು, ತಾರಾ, ಶರತ್ ಲೋಹಿತಾಶ್ವ, ತ್ರಿವಿಕ್ರಮ್ ಸೇರಿದಂತೆ ಹಲವರ ತಾರಾಗಣವಿದೆ. ಸಿನಿಮಾ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಶೇಖರ್ ಎಸ್ ಛಾಯಾಗ್ರಹಣವಿದೆ.
ಬಿಡುಗಡೆ: ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ 2023ರ ನವೆಂಬರ್ 24ರಂದು ಬಿಡುಗಡೆ ಆಯಿತು.
ಕಥೆ:ನಿರ್ದಯಿ ಪೊಲೀಸ್ ಆಫೀಸರ್ ರುದ್ರ. ಆಡೋ ಹುಡುಗರ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಸಿಕ್ಕಿ ಸಮಾಜದ ಸ್ವಾಸ್ಥ್ಯ ಹಾಳಾಗಿರುತ್ತದೆ. ಇದಕ್ಕೆ ಮೂಲ ಕಾರಣ ಮಗಾಯ್, ಫೀನಿಕ್ಸ್ ಅನ್ನೋ ಖತರ್ನಾಕ್ ಪಾತಕಿಗಳ ಕಂಟ್ರೀ ಪಿಸ್ತೂಲ್ ಸಾಮಾಜ್ರ್ಯ. ರುದ್ರ ಆ ಭೂಗತ ಸಾಮ್ರಾಜ್ಯದ ಬೆನ್ನುಬೀಳುವುದು ಯಾಕೆ? ಆತನ ನಿಜವಾದ ಉದ್ದೇಶ ಏನು? ಅನ್ನೋದೇ ಸಿನಿಮಾ ಕತೆ.