ಡಾಲಿ ಧನಂಜಯ್ ನಾಯಕಾನಗಿ ನಟಿಸಲಿರುವ `ಬಡವ ರ‍್ಯಾಸ್ಕಲ್' ಚಿತ್ರವನ್ನು ಧನಂಜಯ ಸ್ನೇಹಿತ ಮತ್ತು ಈವರೆಗೂ ಸಹಾಯಕ ನಿರ್ದೇಶಕರಾಗಿದ್ದ ಶಂಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುಜ್ಜಾಲ್ ಪುರಷೋತ್ತಮ ಜೊತೆ ಧನಂಜಯ್ ಡಾಲಿ ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ಸಹ ನಿರ್ಮಾಣ ಮಾಡಿದ್ದಾರೆ. ಶಂಕರ್ ಧನಂಜಯ್ ಹಿಂದಿನ ಟಗರು ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಚಿತ್ರಕ್ಕೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್
ನಟಿಸಿದ್ದಾರೆ.. `ಪಾಪಕಾರ್ನ ಮಂಕಿ ಟೈಗರ್' ನಂತರ ಮತ್ತೊಮ್ಮೆ ಈ ಜೋಡಿ ಒಂದಾಗಲಿದೆ. ಚಿತ್ರದ ಮುಹೂರ್ತ ಆಗಸ್ಟ್ 3, 2019 ರಂದು ನೇರವೇರಿದೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಈ ಚಿತ್ರದ ಟೈಟಲ್ ಯೋಗರಾಜ್ ಭಟ್ ಬಳಿಯಿತ್ತು. ಚಿತ್ರತಂಡರ ಮನಿವಿ ಮೇರೆಗೆ ಈ ಟೈಟಲ್ ನ್ನು ಧನಂಜಯ್ ಚಿತ್ರಕ್ಕೆ ನೀಡಿದ್ದಾರೆ.
ಬಡವ ರಾಸ್ಕಲ್ ಚಿತ್ರದಲ್ಲಿ ಶಂಕರ್ ಜರ್ನಿಯೇ ಒಂದು ಕಥೆ. ಶಂಕರ್ ಸಿನಿಮಾದಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಇರುವ ವ್ಯಕ್ತಿ. ಹಾಗೇ ಸ್ನೇಹಿತರನ್ನು, ಆಟೋ ಕ್ಯಾಬ್ ಡ್ರೈವರ್‌ಗಳನ್ನು ಪೂಜಿಸುವ ಮತ್ತು ಗೌರವಿಸುವ ವ್ಯಕ್ತಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೇ ಕುಟುಂಬದಲ್ಲಿ ಪ್ರೀತಿಯ ಮಗನಾಗಿದ್ದರೂ ಜವಾಬ್ದಾರಿ ಮಾತ್ರ ಬಂದಿರೋದಿಲ್ಲಾ. ಮಗನನ್ನು ಜವಾಬ್ದಾರಿಯುತವಾಗಿ ನೋಡಬೇಕು ಅನ್ನೋದು ಅಪ್ಪ ಅಮ್ಮನ ಕನಸು. ಆದರೇ ಅದು ಅರ್ಥವಾಗದೆ ಮದ್ಯಪಾನ, ಧೂಮಪಾನ ಮಾಡಿಕೊಂಡು ಸಮಯ ಕಳೆಯುತ್ತಾನೆ ಮಗ. ಮತ್ತು ಫ್ರೀ ಇದ್ದಾಗ ಅಪ್ಪನ ಆಟೋ ಓಡಿಸೋದು ಬಿಟ್ಟು ಬೇರೆನೂ ಕೆಲಸ ಇಲ್ಲ. ಇಂತಃ ಸಂದರ್ಭದಲ್ಲಿ ಶಂಕರ್ ರೌಡಿ ಪಡೆಗೆ ಒಂದು ಸಣ್ಣ ಕಿರಿಕ್‌ನಿಂದಾಗಿ ಕನೆಕ್ಟ್ ಆಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಶಂಕರ್ ರಿಯಲ್ ಜರ್ನಿ.