ಬರ್ಗೆಟ್ ಬಸ್ಯಾ ಸಿನಿಮಾವನ್ನು ರಿಶ್ ಹಿರೇಮಠ್ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಸಂಗೀತ ಎನ್ ಸ್ವಾಮಿ ಈ ಚಿತ್ರದ ನಾಯಕಿ. ಉಳಿದಂತೆ ಅದ್ವಿಕಾ ಸ್ಮಿತಾ ಹೂಗಾರ್, ಪುನೀತ್ ಚಂದ್ರ, ರಘುವಾರ್ಯ ಎಂ.ಕೆ, ಮಹೇಶ್ ಕುಮಾರ್ ಅಧೋನಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸಿದ್ಧಾರ್ಥ ಕಾಮತ್ ಸಂಗೀತ, ಶ್ಯಾಮ್ ಸಾಲ್ವಿನ್ ಛಾಯಾಗ್ರಹಣ ಹಾಗೂ ಸಿದ್ದು ದಳವಾಯಿ ಸಂಕಲನ ಸಿನಿಮಾಗಿದೆ. ನಾಗಾರ್ಜುನ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.