ಸಿಂಪಲ್ ಸುನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಹೊಸಪ್ರತಿಭೆ ಧನವೀರ ನಾಯಕನಾಗಿ ಮತ್ತು ಆದಿತಿ ಫ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧು ಕೋಕಿಲಾ,ದೀಪಕ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಿಮ್ಮೇಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಪಾರಿವಾಳ ಸ್ಪರ್ಧೆಯು ಚಿತ್ರದ ಕಥೆಯೊಂದಿಗೆ ಸಮಾನಾಂತರವಾಗಿ ಸಾಗುತ್ತದೆ. ಅನಾಥನಾಗಿ ಯಜಮಾನನ ಕೆಳೆಗೆ ಬೆಳೆಯುವ ನಾಯಕ ಕಲ್ಕಿ ಪಾರಿವಾಳ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂದಿರಲು ಬಯಸುತ್ತಿರುತ್ತಾನೆ.ನಾಯಕಿ ಪಾರಿಜಾತಳ ಪ್ರೇಮದಲ್ಲಿ ಬೀಳುವ ಕಲ್ಕಿ ಪಾರಿವಾಳ ಸ್ಪರ್ಧೆಯಲ್ಲಿ ಕೂಡ ಗೆದ್ದು ಶೋಕದಾರ ಆಗುತ್ತಾನೆ.ಹೀಗೆ ಉಲ್ಲಾಸವಾಗಿ ಸಾಗುತ್ತಿದ್ದ ಅವನ ಬದುಕಿನಲ್ಲಿ ಒಂದು ದುರಂತ ಘಟಿಸುತ್ತದೆ, ಆ ದುರಂತವೇನ? ನಂತರದ ಘಟನೆಗಳೇನು ಎನ್ನವುದನ್ನು ಚಿತ್ರದ ಮೂಲ ಕತೆ.