ಅನೀಶ್ ತೇಜೇಶ್ವರ್ ನಿರ್ಮಿಸಿ ನಾಯಕನಾಗಿ ನಟಿಸಿರುವ ಬೆಂಕಿ ಚಿತ್ರವನ್ನು ಎ.ಆರ್.ಶಾನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಂಪದಾ ಹುಲಿವಾನ್ ,ಶೃತಿ ಪಾಟೀಲ್, ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಉಮೇಶ್ ಆರ್.ಬಿ ಸಂಕಲನ, ಆನಂದ್ ರಾಜಾವಿಕ್ರಮನ್ ಸಂಗೀತವಿದೆ.
ಕಥೆ
ಈ ಚಿತ್ರ ಅಣ್ಣ-ತಂಗಿಯರ ಬಾಂಧವ್ಯದ ಜೊತೆ ಥ್ರಿಲರ್ ಕಥೆಯನ್ನು ಹೊಂದಿದೆ. ತನ್ನ ತಂಗಿಯ ಅಕಾಲಿಕ ಮರಣದಿಂದ ಕಂಗಾಲಾದ ಸಹೋದರನೊಬ್ಬ ಅವಳ ಸಾವಿನ ಕಾರಣವನ್ನು ಹುಡುಕ ಹೊರಟುತ್ತಾನೆ. ಇಲ್ಲಿ ಅವನಿಗೆ ಶಾಕಿಂಗ್ ರಹಸ್ಯಗಳು ತಿಳಿಯುತ್ತವೆ. ಅವನ್ನು ತನ್ನ ತಂಗಿಯ ಸಾವಿಗೆ ಸೇಡು ತೀರಿಸಿಕೊಳ್ಳುತ್ತಾನಾ ಎಂಬುದು ಚಿತ್ರದ ಕಥೆ.