ಗಿರೀಶ್ ಕುಮಾರ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಚಕ್ರವರ್ತಿ ರೆಡ್ಡಿ ಮತ್ತು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿನಾಯಕ ನಾಡಕರ್ಣಿ, ಶಂಕರ್ ಜಗನ್ನಾಥಿ ಮತ್ತು ಸಚಿನ್ ಮುತಾಲಿಕ್ ದೇಸಾಯಿ ಬಂಡವಾಳ ಹೂಡಿದ್ದಾರೆ. ಗೌತಮ್ ಶ್ರೀವತ್ಸ್ ಸಂಗೀತ ನೀಡಿದ್ದಾರೆ.
ಕಥೆ : ಪೋಟೊಗ್ರಾಫಿ ವಿಷ್ಣುವಿನ ಹವ್ಯಾಸ. ಒಂದು ಸಲ ವಿಷ್ಣು ಟ್ರಿಪ್ ಗೆ ಹೋಗಿದ್ದಾಗ ಅವನ ಕ್ಯಾಮೆರಾದಲ್ಲಿ ಕೆಲ ವಿಚಿತ್ರ ಘಟನೆಗಳು ಸೆರೆಯಾಗುತ್ತವೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ.