ಬಿಸಿಬಿಸಿ ಐಸ್ ಕ್ರೀಂ ಸಿನಿಮಾವನ್ನು ಅರವಿಂದ್ ಶಾಸ್ತ್ರೀ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅರವಿಂದ್ ಅಯ್ಯರ್, ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸೋನು ವೇಣುಗೋಪಾಲ್, ಶನಿಲ್ ಗುರು ಮುಂತಾದವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಹಾಗೂ ಎನೋಷ್ ಒಲಿವೇರಾ ಛಾಯಾಗ್ರಹಣ ಸಿನಿಮಾಗಿದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ ಈ ಚಿತ್ರ ನಿರ್ಮಿಸಿದ್ದಾರೆ.
ಕಥೆ: ಅನಾರೋಗ್ಯದಲ್ಲಿ ಇರುವ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ ಏನಾಗುತ್ತೆ? ಅವಳು ಅವನ ದುಃಖಗಳಿಗೆ ಹೇಗೆ ಔಷಧ ನೀಡುತ್ತಾಳೆ & ಅನೇಕ ಸಾಹಸಕ್ಕೆ ಹೇಗೆ ನಾಂದಿಯಾಗುತ್ತಾಳೆ ಎಂಬ ಕಥೆಯ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.