twitter
    X
    Home ಚಲನಚಿತ್ರಗಳ ಒಳನೋಟ

    ಕನ್ನಡ ಚಿತ್ರರಂಗದ ಎವರಗ್ರೀನ್ ಖಳನಾಯಕರು - ಕನ್ನಡ ಚಿತ್ರರಂಗದ ಆದ್ಯ ಖಳನಾಯಕರು

    Author Administrator | Updated: Saturday, March 20, 2021, 09:07 AM [IST]

    ಚಿತ್ರಕ್ಕೆ ನಾಯಕ ಹೇಗೆ ಪ್ರಧಾನವೋ ಹಾಗೇ ಖಳನಾಯಕ ಕೂಡ. ಖಳನಾಯಕನ ಪಾತ್ರ ಪ್ರಬಲವಾದಷ್ಟು, ನಾಯಕನ ಪಾತ್ರಕ್ಕೆ ಆಳ ಹೆಚ್ಚುತ್ತದೆ. ಕಪ್ಪು- ಬಿಳುಪಿನ ಕಾಲದಲ್ಲಿ ಕೇಡಿ ನಾಗಪ್ಪ ಮತ್ತು ರಂಗರಿಂದ ಕನ್ನಡದ ಖಳ ನಟರ ಪರಂಪರೆ ಆರಂಭವಾಯಿತು. ನಂತರ ಬಂದ ಬಾಲಕೃಷ್ಣ ತಮ್ಮ ಹಾಸ್ಯ ಲೇಪಿತ ಖಳನಾಯಕನ ಪಾತ್ರದಿಂದ ಪ್ರಸಿದ್ದರಾದರು. ತಮಗೇ ಕಿವಿ ಕೇಳದೇ ಇದ್ದರೂ ನಾಯಕ ಮತ್ತು ಸಹಕಲಾವಿದರ ಹಾವಭಾವ ನೋಡಿಕೊಂಡು ಅಭಿನಯಿಸುತ್ತಿದ್ದ ಬಾಲಕೃಷ್ಣ ನಿಧಾನವಾಗಿ ಹಾಸ್ಯ ಮತ್ತು ಪೋಷಕ ಪಾತ್ರಗಳೆಡೆಗೆ ಸರಿಯತೊಡಗಿದರು. ಆಗ ಆರಂಭವಾದದ್ದು ನಟ ಭಯಂಕರ ವಜ್ರಮುನಿ ಯುಗ. ಖಳನ ಪಾತ್ರಗಳಿಗೆ ತಮ್ಮ ರೌದ್ರ ಅಭಿನಯ ಮತ್ತು ಕಂಚಿನ ಕಂಠದಿಂದ ಧೀಮಂತಿಕೆ ತಂದು ಕೊಟ್ಟು ಕನ್ನಡ ಕುಲಕೋಟಿಯನ್ನು ಬೆಚ್ಚಿ ಬೀಳಿಸಿದ ಖ್ಯಾತಿ ವಜ್ರಮುನಿಯವರದು. ನಂತರ ಕೆಲ ಕಾಲದಲ್ಲಿ ಸುದರ್ಶನ್, ತೂಗುದೀಪ ಶ್ರೀನಿವಾಸ, ಸುಂದರಕೃಷ್ಣ ಅರಸ್, ಟೈಗರ್ ಪ್ರಭಾಕರ್, ಸುಧೀರ್, ಶಕ್ತಿ ಪ್ರಸಾದ್ ಮುಂತಾದವರು ತಮ್ಮ ಖಳ ಪಾತ್ರಗಳಿಂದ ಗಮನ ಸೆಳೆದರು . ನಿರ್ಮಾಪಕ ಎಂ.ಪಿ.ಶಂಕರ್ ಕೂಡ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿದರು. ಹಾಗೇ ಟೈಗರ್ ಪ್ರಭಾಕರ್, ಲೋಕೇಶ್ ಖಳನಾಯಕರಾಗಿ ಹಲವು ಚಿತ್ರಗಳಲ್ಲಿ ಮಿಂಚಿದ್ದರೂ, ನಾಯಕರಾಗಿ ಅಭಿಮಾನಿಗಳ ಮನದಲ್ಲಿ ನೆಲಸಿದ್ದಾರೆ. ಧೀರೇಂದ್ರಗೋಪಾಲ್, ಮುಸುರಿ ಕೃಷ್ಣಮೂರ್ತಿ, ದಿನೇಶ್, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ ಖಳನಾಯಕನಾಗಿ ಸಿನಿಪಯಣ ಆರಂಭಿಸಿದರೂ ಖ್ಯಾತಿ ಪಡೆದಿದ್ದು ತಮ್ಮ ಹಾಸಯ ನಟನೆಯ ಮೂಲಕ. ಇಲ್ಲಿ ಕೇವಲ 90 ದಶಕಕ್ಕಿಂತ ಮುಂಚಿನ ಖಳನಾಯಕರನ್ನು ಪಟ್ಟಿ ಮಾಡಲಾಗಿದೆ. 90 ರ ದಶಕದ ನಂತರದಲ್ಲಿ ಬಂದ ಶೋಭರಾಜ್, ಅವಿನಾಶ್, ಕೀರ್ತಿರಾಜ್‌ ಮುಂತಾದ ನಟರನ್ನು ಇನ್ನೊಂದು ಲಿಸ್ಟಿನಲ್ಲಿ ಪ್ರಸ್ತುತ ಪಡಿಸುತ್ತದೆ.

    cover image
    • ಬಾಲಕೃಷ್ಣ
      1

      ಬಾಲಕೃಷ್ಣ

      2nd November 2000 Known As : Director/Producer/Singer/Actor Popular Movies : Toolsidas Junior, Panipat, Mohenjo Daro Biography: ಬಾಲಕೃಷ್ಣ ಕನ್ನಡ ಚಿತ್ರರಂಗದ ದಿಗ್ಗಜ ಧೀಮಂತ ನಟ. ಸುಮಾರು 560 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವಾರು ಬಗೆಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದಿಂದ ಜೀವ ತುಂಬಿದ ಈ ಕಲಾವಿದ ಮುಂದಿನ ಪೀಳಿಗೆಯ ...
    • ವಜ್ರಮುನಿ
      2

      ವಜ್ರಮುನಿ

      10th May 1944 Known As : Popular Movies : Biography: ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ...
    • ಎಂ.ಪಿ.ಶಂಕರ್
      3

      ಎಂ.ಪಿ.ಶಂಕರ್

      30th November 1999 Known As : Producer/Director/Actor/Music Director Popular Movies : Kaabil, Krrish 3, Krrish 3 Biography: ...
    • ಸುದರ್ಶನ್
      4

      ಸುದರ್ಶನ್

      2nd May 1939 Known As : Music Director/Singer/Lyricst/Actor Popular Movies : Omg 2, Omg 2, Kabaad The Coin Biography: ಆರ್.ಎನ್.ಸುದರ್ಶನ್ (ರಟ್ಟೆಹಳ್ಳಿ ನಾಗೇಂದ್ರ) ಕನ್ನಡ ಚಿತ್ರರಂಗದ ಅದ್ಭುತ ನಟ, ಗಾಯಕ ಮತ್ತು ಚಿತ್ರನಿರ್ಮಾಪಕ. ಇವರ ತಂದೆ ಖ್ಯಾತ ನಿರ್ದೇಶಕ ಆರ್.ನಾಗೇಂದ್ರರಾವ್, ಇವರ ಸಹೋದರರಾದ ...
    • ಶಕ್ತಿ ಪ್ರಸಾದ್
      5

      ಶಕ್ತಿ ಪ್ರಸಾದ್

      1st January 1970 Known As : Actor/Singer Popular Movies : Ithanai Naalai Engirunthai, En Ullam Unnai Theduthey, Lawrence Biography: ಶಕ್ತಿ ಪ್ರಸಾದ್ ಕನ್ನಡದ ಖ್ಯಾತ ಖಳ ಮತ್ತು ಪೋಷಕ ನಟ. ಜೆ.ಸಿ.ರಾಮಸ್ವಾಮಿ ಹೆಸರಿನಿಂದ ಮೈಸೂರು ಕರ್ನಾಟಕದಲ್ಲಿ ಜನಿಸಿದ ಇವರು ತಮ್ಮ 20 ವರ್ಷಗಳ ಸಿನಿಜೀವನದಲ್ಲಿ ಸುಮಾರು 200 ಕ್ಕಿಂತ ಹೆಚ್ಚು ...
    • ತೂಗುದೀಪ್ ಶ್ರೀನಿವಾಸ್
      6

      ತೂಗುದೀಪ್ ಶ್ರೀನಿವಾಸ್

      30th November 1942 Known As : Popular Movies : Biography: ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ. 1943ರಲ್ಲಿ ಮುನಿಸ್ವಾಮಿ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರನಾಗಿ ಮೈಸೂರಿನಲ್ಲಿ ...
    • ಟೈಗರ್ ಪ್ರಭಾಕರ್
      7

      ಟೈಗರ್ ಪ್ರಭಾಕರ್

      30th March 1950 Known As : Actor/Director/Singer/Producer/Story Popular Movies : Yaavarum Vallavare, HanuMan, Siren Biography: ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಧೀಮಂತ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಕನ್ನಡ ಚಿತ್ರಗಳಲ್ಲಿ ಕಂಗ್ಲೀಷ್ ಭಾಷೆಯನ್ನು ಬಳಕೆಗೆ ತಂದ ಶ್ರೇಯ ಪ್ರಭಾಕರ್ ಅವರಿಗೆ ಸಲ್ಲಬೇಕು.ಕನ್ನಡ ...
    • ಸುಧೀರ್
      8

      ಸುಧೀರ್

      1st January 1970 Known As : Singer/Actress Popular Movies : Vendhu Thanindhathu Kaadu (Part 1: The Kindling), Harivu, Nedunchalai Biography: ಸುಧೀರ್ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟ ಮತ್ತು ಪೋಷಕ ನಟ. ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ತಮ್ಮ ಅದ್ಭುತ ಅಭಿನಯದಿಂದ ವಿಭಿನ್ನ ಛಾಪನ್ನು ಮೂಡಿಸಿದ್ದಾರೆ. ಇವರಿಗೆ ...
    • ಸುಂದರಕೃಷ್ಣ ಅರಸ್
      9

      ಸುಂದರಕೃಷ್ಣ ಅರಸ್

      1st January 1970 Known As : Director/Producer Popular Movies : Mirattal, Chalaki, Arasangam Biography: ಸುಂದರಕೃಷ್ಣ ಅರಸ್ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟ, ನಿರ್ದೇಶಕ ಮತ್ತು ನಿರ್ಮಾಪಕ. ಹಲವು ಕಲಾವಿದರಿಗೆ ಕಂಠದಾನ ಕೂಡ ಮಾಡಿದ್ದಾರೆ. ಇವರು ಗಿರೀಶ್ ಕಾರ್ನಾಡ್ ರ `ಒಂದಾನೊಂದು ಕಾಲದಲ್ಲಿ' ...
    • ಧೀರೇಂದ್ರ ಗೋಪಾಲ್
      10

      ಧೀರೇಂದ್ರ ಗೋಪಾಲ್

      12th April 1940 Known As : Popular Movies : Biography: ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ...
    • ಮುಸುರಿ ಕ‍ಷ್ಣಮೂರ್ತಿ
      11

      ಮುಸುರಿ ಕ‍ಷ್ಣಮೂರ್ತಿ

      10th March 1930 Known As : Singer Popular Movies : Just Math Mathalli, Shishira, Minchina Ota Biography: ಮುಸುರಿ ಕೃಷ್ನಮೂರ್ತಿ ಕನ್ನಡದ ಧೀಮಂತ ನಟ. ಮೊದಮೊದಲು ಖಳನಾಯಕನಾಗಿ  ಸಿನಿಪಯಣ ಆರಂಭಿಸಿದ ಇವರು ನಂತರ ಹಾಸ್ಯ ಪಾತ್ರಗಳಲ್ಲಿ ನಟಿಸಿ ಕೀರ್ತಿ ಪಡೆದರು. 1930 ರಲ್ಲಿ  ಮೈಸೂರಿನ ...
    • ದೊಡ್ಡಣ್ಣ
      12

      ದೊಡ್ಡಣ್ಣ

      11th November 1949 Known As : Actress Popular Movies : The Vaccine War, Anya The Other, Vodka Diaries Biography: ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ...
    • ಮುಖ್ಯಮಂತ್ರಿ ಚಂದ್ರು
      13

      ಮುಖ್ಯಮಂತ್ರಿ ಚಂದ್ರು

      28th August 1953 Known As : Singer Popular Movies : Aamir, Biography: ಬೆಂಗಳೂರಿನಲ್ಲಿ ನೆಲೆಸಿರುವ ಮುಖ್ಯಮಂತ್ರಿ ಚಂದ್ರು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಖಳನಾಯಕನ ಪಾತ್ರದಿಂದ ಹಿಡಿದು,ಹಾಸ್ಯ, ಪೋಷಕ ಪಾತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿರುವ ಚಂದ್ರು ...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X