ಬ್ರ್ಯಾಟ್ ಸಿನಿಮಾವನ್ನು ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಹಾಗೂ ಮನಿಶಾ ಕಂದಕೂರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಹಾಗೂ ಗಿರಿ ಮಹೇಶ್ ಸಂಕಲನ ಸಿನಿಮಾಗಿದೆ. ಮಂಜುನಾಥ್ ವಿ ಕಂದಕೂರ್ ಈ ಸಿನಿಮಾವನ್ನು ಡಾಲ್ಫಿನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಇದೊಂದು ಅಪ್ಪ ಮಗನ ಸಂಘರ್ಷದ ಕಥೆಯಾಗಿದೆ. ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ.