X
ಕ್ಯಾಪ್ಚರ್
Thriller | 09 May 2025 |
Kannada

ಕ್ಯಾಪ್ಚರ್ ಕಥೆ

ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರು 'ಕ್ಯಾಪ್ಚರ್' ಸಿನಿಮಾವನ್ನು ಲೋಹಿತ್ ಹೆಚ್ ನಿರ್ದೇಶನ ಮಾಡಿದ್ದಾರೆ.  ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದು. ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಶ್ರೀ ದುರ್ಗಪರಮೇಶ್ವರಿ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. 

'ಕ್ಯಾಪ್ಚರ್' ಚಿತ್ರವನ್ನು ಸಂಪೂರ್ಣವಾಗಿ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಂದರೆ ಇಡೀ ಸಿನಿಮಾ ಸಿಸಿಟಿವಿ ದೃಶ್ಯಾವಳಿ ನೋಡಿದ ಅನುಭವ ನೀಡಲಿದೆ. ಇನ್ನುಳಿದಂತೆ ಭಯ, ಕುತೂಹಲ, ಟ್ವಿಸ್ಟ್ ಈ ಕತೆಯಲ್ಲಿ ಇರಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ. ಚಿತ್ರಕ್ಕೆ ಎಸ್. ಪಾಂಡಿಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದು ರವಿಚಂದ್ರನ್ ಸಂಕಲನವಿದೆ.

ಪೋಸ್ಟರ್ ಬಿಡುಗಡೆ: 2023ರ ಅಕ್ಟೋಬರ್ 17ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್ ನಿಲ್ಲಿಸಿ, ಈ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಪೋಸ್ಟರ್ ಲಾಂಚ್ ಮಾಡಿದರು.  

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+