ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಕ್ರೈಮ್ ಥ್ರಿಲ್ಲರ್ `ಚೇಜ್' ಚಿತ್ರದಲ್ಲಿ ರಾಧಿಕಾ ಚೇತನ್ ಮತ್ತು ಅವಿನಾಶ್ ನರಸಿಂಹರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ರಾಜೇಶ್ ನಟರಾಜ್, ಅರ್ಜುನ್ ಯೋಗೇಶ್ ರಾಜ್, ಸಿದ್ಧಾರ್ಥ್ ಮಾಧ್ಯಮಿಕ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ್ ಸಂಗೀತ ನೀಡಿದ್ದರೆ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ ಮಾಡಿದ್ದಾರೆ. ಪ್ರದೀಫ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತು ಮನೋಹರ್ ಸುವರ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಥೆ
ಊರ ಹೊರಗಿನ ಕ್ವಾರಿಯೊಂದರಲ್ಲಿ ಮಹಿಳೆಯ ಹೆಣ ಸಿಗುತ್ತದೆ. ಇದರ ಜಾಡನ್ನು ಹಿಡಿದು ಹೊರಟ ಪೋಲಿಸ್ ರಿಗೆ ಸರಣಿ ಕೊಲೆಗಳ ಸುಳಿವು ಸಿಗುತ್ತದೆ. ಹೀಗೆ ಈ ಎಲ್ಲಾ ಕೊಲೆಯಾದವರ ಸಂಬಂಧಿಗಳು ಒಂದು ಹಂತದಲ್ಲಿ ಪರಸ್ಪರ ಮುಖಾಮುಖಿಯಾದಾಗ ನಿಜವಾದ ಕೊಲೆಗಾರನ ಕುರಿತು ಮಾಹಿತಿ ಸಿಗುತ್ತದೆ.