ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಈ ಚಿತ್ರವನ್ನು ಬಿ.ವಿ.ಕಾರಂತ ನಿರ್ದೇಶನ ಮಾಡಿದ್ದರು. ಈ ಚಿತ್ರ 1975 ರಲ್ಲಿ ರಾಷ್ಟೀಯ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು. ಎಂ.ವಿ. ವಾಸುದೇವ ರಾವ್, ಪದ್ಮಾ ಕುಮುಟಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎಸ್. ರಾಮಚಂದ್ರ ಛಾಯಾಗ್ರಹಣ ಮತ್ತು ಪಿ. ಭಕ್ತವತ್ಸಲಂ ಸಂಕಲನ ಚಿತ್ರಕ್ಕಿತ್ತು.
ಉಳುಮೆ ಮಾಡುವ ಅಪಾರ ಆಸೆಯುಳ್ಳ ಚೋಮನಿಗೆ ದಲಿತ ಜನಾಂಗಕ್ಕೆ ಸೇರಿದವನೆಂದು ಉಳುಮೆಗೆ ಅವಕಾಶ ನೀಡುವುದಿಲ್ಲ. ನಾಲ್ಕು ಮಕ್ಕಳು ಮತ್ತು ಒಬ್ಬ ಮಗಳು ತಂದೆಯ ಸಾಲವನ್ನು ತೀರಿಸಲು ಹೋಗಿ ಒಂದೊಂದು ದಿಕ್ಕಿನಲ್ಲಿ ಹತಭಾಗ್ಯರಾಗುತ್ತಾರೆ. ಕೊನೆಗೆ ನಿರಾಶೆಯೊಂದೆ ಚೋಮನ ಪಾಲಿಗೆ ಉಳಿದಾಗ ಎಲ್ಲರನ್ನೂ ದೂರ ಮಾಡಿ, ಸಾವಿನ ಕರೆ ಬರುವರೆಗೂ ತನ್ನ ದುಡಿ (ತಮಟೆ) ಯನ್ನು ಬಾರಿಸುತ್ತಾ ಕೂರುತ್ತಾನೆ.