ಛೂ ಮಂತರ್ ಸಿನಿಮಾವನ್ನು ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನ ಮಾಡಿದ್ದಾರೆ. ಶರಣ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ. ಶರಣ್ ಜೊತೆ ಕಾಮಿಡಿ ಕಳಗುಳಿ ಇಡಲು ಮತ್ತೊಮ್ಮೆ ಚಿಕ್ಕಣ್ಣ ಕೈಜೋಡಿಸಿದ್ದಾರೆ. ಉಳಿದಂತೆ ಪ್ರಭು ಮುಂಡೂಕರ್, ರಜಿನಿಕಾ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಛೂ ಮಂತರ್ ಚಿತ್ರಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡಿದ್ದು, ಇದು ಅವರ ಬ್ಯಾನರ್‌ನ 5ನೇ ಸಿನಿಮಾ ಎನ್ನುವುದು ವಿಶೇಷ. ಈ ಹಾರರ್ ಕಾಮಿಡಿ ಚಿತ್ರವನ್ನು ಅನೂಪ್ ಕಟ್ಟುಕರನ್ ಸೆರೆ ಹಿಡಿದಿದ್ದಾರೆ. ವೆಂಕಿ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಸಿನಿಮಾ ಕಥೆ
'ಛೂ ಮಂತರ್' ಅನ್ನೋದು ಮಂತ್ರನೋ ಮತ್ತೊಂದೋ ಏನೂ ಅಲ್ಲ. ಇದೊಂದು ದೆವ್ವ ಬಿಡಿಸುವ ಆಫೀಸಿನ ಹೆಸರು. ಅದರಲ್ಲಿ ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ ಪ್ರಮುಖರು. ದೆವ್ವ ಬಿಡಿಸೋದ್ರಲ್ಲಿ ನಿಸ್ಸೀಮನಾಗಿರುವ ಶರಣ್, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ನಿಧಿಯನ್ನು ಹುಡುಕಿಕೊಂಡು ಮಾರ್ಗನ್ ಹೌಸ್‌ಗೆ ಹೋಗುತ್ತಾರೆ. ಅಲ್ಲಿಂದ ಕಥೆಯೊಳಗೊಂದೊಂದು ಕಥೆ ತೆರೆದುಕೊಳ್ಳುತ್ತಾ ಹೋಗುತ್ತೆ. ಪ್ರತಿಯೊಂದು ಕಥೆಗೂ ಒಂದೊಂದು ಕನೆಕ್ಷನ್ ಇದೆ. ಆ ಕಥೆಗಳಿಗೂ ಶರಣ್, ಅದಿತಿ ಪ್ರಭುದೇವಗೂ ಲಿಂಕ್ ಇದೆ. ಅದೇನದು? ಎಂಬುದೇಚಿತ್ರದ ಕಥೆ.
ಬಿಡುಗಡೆ: ಛೂ ಮಂತರ್ ಸಿನಿಮಾ 2025ರ ಜನವರಿ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.