1986 ರಲ್ಲಿ ಹಕ್ಕಿ ಕೃಷ್ಣ (ಪ್ರೇಮ್), ದೊಡ್ಡ ರೌಡಿ ಆಗಬೇಕು ಎಂಬ ಆಸೆಯಲ್ಲಿ, ಮಾಡದ ಕೊಲೆಗೆ ಸರೆಂಡರ್ ಆಗಿ ಜೈಲಿಗೆ ಸೇರುತ್ತಾನೆ. 1995 ರಲ್ಲಿ ಜರುಗುವ ಕಥೆಯಲ್ಲಿ ಕೃಷ್ಣ ರಾವ್ (ದಿಗಂತ್) ಹೆಣ್ಣಿನ ಮೋಹಕ್ಕೆ ಒಳಗಾಗಿ, ಈತನು ಸಹ ಮಾಡದ ತಪ್ಪಿಗೆ ಶಿಕ್ಷೆಗೆ ಗುರಿ ಆಗುತ್ತಾನೆ. ಇನ್ನೂ 2000 ಇಸವಿಯಲ್ಲಿ ಕಾಣಿಸಿಕೊಳ್ಳುವ ಸೂರ್ಯ ಶೆಟ್ಟಿ(ವಿಜಯ್ ರಾಘವೇಂದ್ರ) ತಾನು ಮತ್ತು ತನ್ನ ಪ್ರೇಯಸಿ(ಭಾವನಾ) ಇಬ್ಬರು, ಪಬ್ ಒಂದರ ಮೇಲೆ ದಾಳಿ ನಡೆದಾಗ ಬಚಾವಾಗುವ ವೇಳೆ ಸೂರ್ಯ ಶೆಟ್ಟಿ ಇಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆದ್ದರಿಂದ ಸೂರ್ಯ ಶೆಟ್ಟಿ ಸಹ 14 ವರ್ಷಗಳ ಜೈಲು ಶಿಕ್ಷೆಗೆ ಗುರಿ ಆಗುತ್ತಾರೆ. 2007 ಕಾಲಘಟ್ಟದಲ್ಲಿ ಕಾಣಿಸಿಕೊಂಡಿರುವ ಮೊಹಮದ್ ಅನ್ವರ್(ಪ್ರಜ್ವಲ್ ದೇವರಾಜ್) ಟೂರಿಸ್ಟ್ ಗೈಡ್ ಆಗಿ ಬಣ್ಣ ಹಚ್ಚಿದ್ದಾರೆ. ಪರಮ ದೇಶಭಕ್ತ ನಾದರೂ ಇತರರಿಗೆ ಸಹಾಯ ಮಾಡಲು ಹೋಗಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅನ್ವರ್ ಗೂ ಮರಣದಂಡನೆಗೆ ಶಿಕ್ಷೆಗೆ ಗುರಿಯಾಗುತ್ತಾನೆ.ವಿಭಿನ್ನವಾಗಿ ಸಾಗುವ ನಾಲ್ಕು ಸ್ಟಾರ್ ಗಳ ನಾಲ್ಕು ಚಿತ್ರಕಥೆ ಒಟ್ಟಿಗೆ ಸಾಗಿದ್ದು, ತೆರೆಮೇಲೆ ಒಮ್ಮೆಯೇ ನಾಲ್ವರು ಜೈಲಿಗೆ ಹೋಗುವ ದೃಶ್ಯವನ್ನು ನಿರ್ದೇಶಕರು ತೋರಿಸಿದ್ದು, ಕಂಕ್ಲೂಸನ್ 2017 ರಲ್ಲಿ ಎಂದು ಹೇಳುವ ಮೂಲಕ ಸಸ್ಪೆನ್ಸ್ ಅನ್ನು ಪ್ರೇಕ್ಷಕರ ಮುಂದೆ ಇಡುತ್ತಾರೆ.