twitter

    ದಬಾಂಗ್ 3 ಕಥೆ

    ಸಲ್ಮಾನ್ ಖಾನ್ ರ ಹಿಂದಿನ ಎರಡು ದಬಾಂಗ್ ಚಿತ್ರಗಳ ಮೂರನೇ ಅವತರಿಣಿಕೆಯಾಗಿ ದಬಾಂಗ್ 3 ಮೂಡಿಬಂದಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಚುಲಬುಲ್ ಪಾಂಡೆಗೆ ಟಕ್ಕರ್ ಕೊಡಲಿದ್ದಾರೆ. ಮೊದಲೆರೆಡು ಭಾಗದಂತೆ ಸೋನಾಕ್ಷಿ ಸಿನ್ಹಾ ಸಲ್ಮಾನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅರ್ಬಾಜ್ ಖಾನ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದ ಕಥೆ ಮಧ್ಯ ಪ್ರದೇಶದಲ್ಲಿ ತೆರೆದು ಕೊಳ್ಳಲಿದೆ.ಸುದೀಪ್ ಬಲ್ಲಿ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಪುತ್ರಿ ಸಾಯಿ ಮಂಜ್ರೇಕರ್ ಕೂಡ ನಟಿಸುತ್ತಿದ್ದಾರೆ.

    ಖಡಕ್ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ (ಸಲ್ಮಾನ್ ಖಾನ್) ಜೀವನದಲ್ಲಿ ಒಂದು ಲವ್ ಸ್ಟೋರಿ ಇದೆ. ಖುಷಿ (ಸೈಯಿ ಮಂಜ್ರೇಕರ್) ಜೊತೆ ಚುಲ್ ಬುಲ್ ಗೆ ಲವ್ ಆಗುತ್ತೆ. ಆಕೆಯ ಜೊತೆ ಮದ್ವೆನೂ ಫಿಕ್ಸ್ ಆಗುತ್ತೆ. ಆದರೆ, ಖುಷಿಯನ್ನು ನೋಡಿದ ಮೊದಲ ನೋಟದಲ್ಲೇ ಬಾಲಿ ಸಿಂಗ್ ಗೂ (ಸುದೀಪ್) ಪ್ರೀತಿಯಾಗುತ್ತೆ. ಖುಷಿ ಮತ್ತು ಚುಲ್ ಬುಲ್ ಪ್ರೀತಿ ವಿಷ್ಯ ತಿಳಿದ ಬಾಲಿ ಸಿಂಗ್ ತನಗೆ ಸಿಗದ ಪ್ರೀತಿ ಬೇರೆಯವರಿಗೂ ಸಿಗಬಾರದು ಎಂದು ಖುಷಿ, ಆಕೆಯ ತಂದೆ-ತಾಯಿಯನ್ನು ಕ್ರೂರವಾಗಿ ಕೊಲ್ಲುತ್ತಾನೆ. ಆ ಸಂದರ್ಭದಲ್ಲಿ ಅಸಹಾಯಕನಾಗಿ ನಿಲ್ಲುವ ಚುಲ್ ಬುಲ್ ಪಾಂಡೆ ಬಾಲಿ ಸಿಂಗ್ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಕಥೆ.

    **Note:Hey! Would you like to share the story of the movie ದಬಾಂಗ್ 3 with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X