ದೈಜಿ ಸಿನಿಮಾವನ್ನು ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ. ಸಿನಿಮಾವನ್ನು ರವಿ ಕಶ್ಯಪ್ ತಮ್ಮ ವಿಭಾ ಕಶ್ಯಪ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ದೈಜಿ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಅಮೆರಿಕಾದಲ್ಲಿ ನಡೆಯಲಿದೆ.
ಫಸ್ಟ್ ಲುಕ್: ದೈಜಿ ಚಿತ್ರದ ಫಸ್ಟ್ ಲುಕ್‌ನ್ನು ಸೆಪ್ಟಂಬರ್ 10ರಂದು ರಮೇಶ್ ಅರವಿಂದ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಯಿತು.