X
ಡಿಯರ್ ಕಾಮ್ರೇಡ್
Action | 26 Jul 2019 | U/A |
Kannada

ಡಿಯರ್ ಕಾಮ್ರೇಡ್ ಕಥೆ

ಹಿನ್ನಲೆ- ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಡಿಯರ್ ಕಾಮ್ರೇಡ್ ತೆಲುಗಿನ ಇದೇ ಹೆಸರಿನ ಚಿತ್ರದ ಡಬ್ ಅವತರಣಿಕೆಯಾಗಿದೆ. ಭರತ್ ಕಮ್ಮ ನಿರ್ದೇಶಿಸಿರುವ ಈ ಚಿತ್ರಕ್ಕೆ ನವೀನ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತವಿದೆ.ಶೃತಿ ರಾಮಚಂದ್ರನ್, ಆನಂದ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಲ್ಲಿ  ಏಕಕಾಲಕ್ಕೆ ಬಿಡುಗಡೆಗೊಂಡಿದೆ.ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ರಶ್ಮಿಕಾರವರೇ ಡಬ್ ಮಾಡಿದ್ದಾರೆ.

ಕಥೆ- ಬಾಬಿ ಕಾಲೇಜ್ ನ ಪ್ರತಿಯೊಂದು ಚಳುವಳಿಯಲ್ಲಿ ಮುಂದಿರುವ ಕಾಲೇಜ್ ಲೀಡರ್. ತುಂಬಾ ಮುಂಗೋಪಿ ಮತ್ತು ಯಾವಾಗಲೂ ಒಂದಿಲ್ಲ ಒಂದು ಫೈಟ್ ಗಳಲ್ಲಿ ಭಾಗಿಯಾಗಿರುತ್ತಾನೆ. ಇವನ  ಲಿಲಿ ಪ್ರೀತಿಯಲ್ಲಿ ಬೀಳುತ್ತಾನೆ. ಲಿಲಿ ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ. ಆದರೆ ಬಾಬಿಯ ದುಡುಕು ಸ್ವಭಾವ ಅವಳಿಗೆ ಆಗಿ ಬರದು. ಕಾರಣ ಇದೇ ರೀತಿ ಕಾಲೇಜ್ ಗುಂಪು ಜಗಳಗಳಲ್ಲಿ ಲಿಲಿ ಸಹೋದರ ಸಾವಿಗೆ ತುತ್ತಾಗಿರುತ್ತಾನೆ. ಬಾಬಿಯ ಈ ಸ್ವಭಾವ ತಡೆಯಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಅವನಿಂದ ದೂರವಾಗುತ್ತಾಳೆ. ಈ ಬ್ರೇಕ್ ಅಪ್ ನಂತರ ಬಾಬಿ ಬದಲಾಗುತ್ತಾನಾ? ಅವನು ಕಳೆದುಕೊಂಡ ಪ್ರೀತಿ ಮರಳಿ ಸಿಗುತ್ತದಾ ಎನ್ನುವುದು ಚಿತ್ರದ ಕಥೆ

ಸಾರಾಂಶ- ಒಬ್ಬ ಮುಂಗೋಪಿ ಯುವಕ ಮತ್ತು ಒಬ್ಬ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಮಧ್ಯೆ ಚಿಗುರುವ ಪ್ರೇಮವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇವರ ಪ್ರೇಮ ಪಯಣದಲ್ಲಿ ಬರುವ ತೊಡುಕುಗಳು ಮತ್ತು ಅದನ್ನು ಹೇಗೆ  ಕಾಮ್ರೇಡ್ ರೀತಿ ಎದುರಿಸಬೇಕು ಎಂದು ಚಿತ್ರದ ಕಥಾವಸ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+