ವಿಜಯ ರಾಘವೇಂದ್ರ ಮತ್ತು ಶ್ರಾವ್ಯ ರಾವ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ `ಧರ್ಮಸ್ಯ' ಚಿತ್ರವನ್ನು ವಿರಾಜ್ ನಿರ್ದೇಶಿಸಿದ್ದಾರೆ. ಸಾಯಿಕುಮಾರ್ ಖಳನಾಯಕನಾಗಿ ನಟಿಸಿದ್ದರೆ, ಪ್ರಜ್ವಲ್ ದೇವರಾಜ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಧರ್ಮ (ವಿಜಯ ರಾಘವೇಂದ್ರ) ಮತ್ತು ಜೀವ (ವಿರಾಜ್) ಬಾಲ್ಯದ ಗೆಳೆಯರು. ಕಾರಣಾಂತರಗಳಿಂದ ಬಾಲ್ಯದಲ್ಲಿ ಬೇರೆಯಾದ ಈ ಸ್ನೇಹಿತರು ದೊಡ್ಡವರಾದ ಮೇಲೆ ಒಂದುಗೂಡುತ್ತಾರೆ. ಜೀವ ಧರ್ಮನನ್ನು ಭೂಗತ ಲೋಕಕ್ಕೆ ಪರಿಚಯಿಸುತ್ತಾನೆ. ಇದೇ ಸಮಯದಲ್ಲಿ ಜೀವನ ಸಹೋದರಿ ಐಶ್ವರ್ಯಗೆ (ಶ್ರಾವ್ಯ) ಧರ್ಮನ ಮೇಲೆ ಪ್ರೀತಿ ಹುಟ್ಟುತ್ತದೆ.
ಜೀವ ತಾನು ಕೆಲಸ ಮಾಡುವ ಭೂಗತ ದೊರೆ ಮಾರಿ (ಸಾಯಿಕುಮಾರ್) ಹತ್ತಿರ ಒಂದು ವ್ಯವಹಾರಕ್ಕಾಗಿ ಹೋದಾಗ ಮಾರಿ ಜೀವನನ್ನು ಕೊಲ್ಲುತ್ತಾನೆ. ತನ್ನ ಅಣ್ಣನ ಸಾವಿಗೆ ಧರ್ಮನೇ ಕಾರಣನೆಂದು ಐಶ್ವರ್ಯ ಧರ್ಮನಿಂದ ದೂರವಾಗುತ್ತಾಳೆ. ಮಾರಿ ಕೂಡ ಧರ್ಮನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಇವೆಲ್ಲದರಿಂದ ಧರ್ಮ ಹೇಗೆ ಪಾರಾಗುತ್ತಾನೆ ಎಂಬುದು ಚಿತ್ರದ ಮೂಲಕಥೆ.