twitter
    X
    Home ಚಲನಚಿತ್ರಗಳ ಒಳನೋಟ

    BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು

    Author Administrator | Published: Thursday, February 27, 2020, 04:37 PM [IST]

    2020 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಅದ್ಧೂರಿಯಿಂದ ಆರಂಭವಾಗಿದೆ..ಮುಖ್ಯಮಂತ್ರಿ ಯಡಿಯೂರಪ್ಪ, ನಟ ಯಶ್, ನಟಿ ಆದಿತಿ ಪ್ರಭುದೇವ ಮತ್ತು ಜಯಪ್ರದಾ ಮತ್ತು ಗಾಯಕ ಸೋನು ನಿಗಮ್ ಈ ಸಾಲಿನ ಸಿನಿ ಮಹೋತ್ಸವಕ್ಕೆ ಚಾಲನೆ ನೀಡಿದರು. 15 ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಲ್ಲಿ ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳನ್ನು ನೀಡಿದೆ. ಬೆಲ್ ಬಾಟಮ್ ಮತ್ತು ಕವಲುದಾರಿ ಚಿತ್ರಗಳು ಜನಪ್ರಿಯ ವಿಭಾಗ ಮತ್ತು ಸ್ಪರ್ಧಾ ವಿಭಾಗ ಎರಡರಲ್ಲೂ ಪ್ರದರ್ಶನಗೊಳ್ಳುತ್ತಿವೆ.

    cover image
    ಅವನೇ  ಶ್ರೀಮನ್ನಾರಾಯಣ

    ಅವನೇ ಶ್ರೀಮನ್ನಾರಾಯಣ

    1

    ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಈ ಚಿತ್ರವನ್ನು ಸಚಿನ್ ನಿರ್ದೇಶಿಸಿದರು. ಬಚ್ಚಿಟ್ಟ ನಿಧಿಯನ್ನು ಹುಡುಕುವ ಎರಡು ಬಣಗಳು ಮತ್ತು ಅವರಿಗೆ ಚಳ್ಳೆಹಣ್ಣು ತಿನಿಸುವ ಕಿಲಾಡಿ ಪೋಲಿಸ್ ಆಫೀಸರ್ ಕತೆಯನ್ನು ಹೊಂದಿತ್ತು.

    ಬೆಲ್ ಬಾಟಮ್

    ಬೆಲ್ ಬಾಟಮ್

    2

    ಜಯತೀರ್ಥ ನಿರ್ದೇಶನದ, ರಿ‍ಷಭ್ ಶೆಟ್ಟಿ ಡಿಟೆಕ್ಟಿವ್ ಕಮ್ ಡಿಫೆಕ್ಟಿವ್ ದಿವಾಕರನ ಅವತಾರ ತಾಳಿದ ಚಿತ್ರ ಬೆಲ್ ಬಾಟಂ. ತನ್ನ ಚಾಣಾಕ್ಷತೆಯಿಂದ ಒಂದು ಪ್ರಸಿದ್ಧ ಸರಣಿ ಕಳ್ಳತನವನ್ನು ಭೇಧಿಸುವ ಡಿಟೆಕ್ಟಿವ್ ಕಥೆಯನ್ನು ಚಿತ್ರ ಹೊಂದಿದೆ..

    ಐ ಲವ್ ಯು

    ಐ ಲವ್ ಯು

    3

    ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಪ್ರೀತಿ ಪ್ರೇಮಗಳಲ್ಲಿ ನಂಬಿಕೆಯಿಲ್ಲದ ವ್ಯಕ್ತಿ ಮುಂದೆ ಅದೇ ಪ್ರೀತಿಗಾಗಿ ಹೇಗೆ ಹಂಬಲಿಸುತ್ತಾನೆ ಎಂಬುದನ್ನು ಚಿತ್ರ ತೋರಿಸಿತು.

    ಕಾಳಿದಾಸ ಕನ್ನಡ ಮೇಷ್ಟ್ರು

    ಕಾಳಿದಾಸ ಕನ್ನಡ ಮೇಷ್ಟ್ರು

    4

    ಕವಿರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಜಗ್ಗೇಶ್ ಕಾಳಿದಾಸ್ ಮೇಷ್ಟ್ರಾಗಿ ಕನ್ನಡ ಪಾಠ ಹೇಳಿದರೆ, ಮೇಘನಾ ಗಾಂವಕರ್ ಕಾಳಿ ಅವತಾರದಲ್ಲಿ ಜಗ್ಗೇಶ್ ರನ್ನು ನಿಯಂತ್ರಿಸಿದರು.

    ಕವಲುದಾರಿ

    ಕವಲುದಾರಿ

    5

    ಒಂದು ಹಳೆಯ ಕೊಲೆಯ ಬೆನ್ನತ್ತಿ ಹೋಗುವ ಟ್ರಾಫಿಕ್ ಅಧಿಕಾರಿ ಹಲವು ಕವಲುಗಳ (ಸುಳಿವುಗಳ) ಹಾದಿಯಲ್ಲಿ ಬಂದು ನಿಲ್ಲುತ್ತಾನೆ..ಈ ಹಂತದಲ್ಲಿ ಹಳೆಯ ನಿವೃತ್ತ ಅಧಿಕಾರಿಯ ಮಾರ್ಗದರ್ಶನ ಪಡೆಯುತ್ತಾನೆ.ಹಲವು ಪದರುಗಳ ಈ ಥ್ರಿಲ್ಲರ್ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮತ್ತು ಪುನೀತ್ ರಾಜಕುಮಾರ್ ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬಂದಿತ್ತು.

    ಕಿಸ್

    ಕಿಸ್

    6

    ಅಂಬಾರಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಿಂದ ಯುವ ಪ್ರತಿಭೆಗಳಾದ ವಿರಾಟ್ ಮತ್ತು ಶ್ರೀಲೀಲಾ ಚಂದನವನ ಪ್ರವೇಶಿಸಿದರು. ಈ ಚಿತ್ರ ಯುವ ಆವಸ್ಥೆಯಲ್ಲಿ ಮೂಡುವ ಆಧುನಿಕ ಪ್ರೇಮ ಕಥೆಯನ್ನು ಹೇಳಿತು.

    ಕುರುಕ್ಷೇತ್ರ

    ಕುರುಕ್ಷೇತ್ರ

    7

    ಮುನಿರತ್ನ ನಿರ್ಮಾಣದ ,ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಘರ್ಜಿಸಿದರು. ಮಹಾಭಾರತದ ಕೌರವ-ಪಾಂಡವರ ಅಂತಿಮ ಕಲಹ ಕುರುಕ್ಷೇತ್ರ ಯುದ್ಧವನ್ನು ತೆರೆಮೇಲೆ 3ಡಿಯಲ್ಲಿ ಚಿತ್ರಿಸಿತು.

    ನಟಸಾರ್ವಭೌಮ

    ನಟಸಾರ್ವಭೌಮ

    8

    ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಪೋಟೊ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರು. ಭೂತಗಳ ಭಯ ಸೃಷ್ಟಿಸಿ ತನ್ನ ಪ್ರೇಮಿಯ ಸಾವಿನ ಸೇಡನ್ನು ತೀರಿಸಿಕೊಳ್ಳುವ ನಾಯಕನ ಪಾತ್ರದಲ್ಲಿ ಪುನೀತ್ ನಟಿಸಿದ್ದರು.

    ಪೈಲ್ವಾನ್

    ಪೈಲ್ವಾನ್

    9

    ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಹಳ್ಳಿ ಜಟ್ಟಿ ಪೈಲ್ವಾನ್ ಪಾತ್ರದ ಜೊತೆಗೆ ಆಧುನಿಕ ಬಾಕ್ಸರ್ ಪಾತ್ರದಲ್ಲಿ ಕೂಡ ಮಿಂಚಿದರು. ಒಂದು ಉನ್ನತ ಉದ್ದೇಶಕ್ಕಾಗಿ ಹೋರಾಡುವ ನಾಯಕನ ಕತೆಯನ್ನು ಹೊಂದಿತ್ತು.

    ಯಜಮಾನ

    ಯಜಮಾನ

    10

    ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಆಧುನಿಕ ರೈತನಾಗಿ ಕಾಣಿಸಿಕೊಂಡರು. ಹೇಗೆ ಬ್ರಾಂಡ್ ಗಳು ಕೃಷಿಕರ ಶೋಷಣೆ ಮಾಡುತ್ತವೆ ಎಂಬದನ್ನು ಚಿತ್ರ ಸಮರ್ಥವಾಗಿ ಕಟ್ಟಿ ಕೊಟ್ಟಿತು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X