ಧ್ರುವತಾರೆ ಸಿನಿಮಾವನ್ನು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಪ್ರತೀಕ್ ಪತ್ನಿ ಮೌಲ್ಯ ಈ ಚಿತ್ರದ ನಾಯಕಿ. ಉಳಿದಂತೆ ಬಿಗ್‌ಬಾಸ್ ಸೀಸನ್ 11ರ ಖ್ಯಾತಿಯ ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಪಿಡಿ ಸತೀಶ್ ಚಂದ್ರ, ಮೂಗ್ ಸುರೇಶ್, ಸಂಗೀತ ನಾರಾಯಣ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸೂರಜ್ ಜೋಯಿಸ್ ಸಂಗೀತ, ಚಂದನ್ ನಾಯ್ಕ್ ಛಾಯಾಗ್ರಹಣ ಸಿನಿಮಾಗಿದೆ. ಜಿಪಿ ಫಿಲ್ಮ ಬ್ಯಾನರ್ ಅಡಿಯಲ್ಲಿ ಧ್ರುವತಾರೆ ಚಿತ್ರ ನಿರ್ಮಾಣ ಮಾಡಲಾಗಿದೆ. ಇದೊಂದು ಆಧುನಿಕ ಪ್ರೇಮಕಥೆಯಾಧಾರಿತ ಚಿತ್ರವಾಗಿದೆ.
ಬಿಡುಗಡೆ: ಧ್ರುವತಾರೆ ಸಿನಿಮಾ 2024ರ ಸೆಪ್ಟಂಬರ್ 20ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.