ದಿಗ್ವಿಜಯ ಸಿನಿಮಾವನ್ನು ದುರ್ಗಾ ಪಿ.ಎಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ದಿಗ್ವಿಜಯ ಸಿನಿಮಾದಲ್ಲಿ ಯುವ ಪ್ರತಿಭೆ ಜಯಪ್ರಭು ಲಿಂಗಾಯತ್ ಹಾಗೂ ಸ್ನೇಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ೩೦ ಜನ ನಿಜವಾದ ರೈತರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಸುಚೇಂದ್ರ ಪ್ರಸಾದ್, ದುಬೈ ರಫೀಕ್, ಪಟ್ರೆ ನಾಗರಾಜ್, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ ಪಿ ಮುಂತಾದವರು ಫೋಷಕ ನಟಿಸಿದ್ದಾರೆ. ಚಿತ್ರವನ್ನು ಜೆ.ಪಿ ಎಂಟರ್‌ಟೈನ್‌ಮೆಂಟ್ ಅಡಿ ಜಯಪ್ರಭು ಆರ್ ಲಿಂಗಾಯತ್, ಅರುಣ್ ಸುಕದರ್ ಹಾಗೂ ಹರೀಶ್ ಆರ್ ಸಿ ನಿರ್ಮಿಸಿದ್ದಾರೆ. ಸಿನಿಮಾಗೆ ಹರ್ಷ ಸಂಗೀತ ನೀಡಿದ್ದು, ವೀನಸ್ ಮೂರ್ತಿಯವರ ಛಾಯಾಗ್ರಹಣವಿದೆ.