ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದ ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ಯ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಒಬ್ಬ ಯುವಕ ಜಾನಪದ ಗುಂಪಿನ ಜೊತೆ ಸೇರಿ ಡೊಳ್ಳು ಬಾರಿಸುತ್ತಾ ತನ್ನ ಅಸ್ತತ್ವವನ್ನು ಹುಡುಕಲು ಹೊರಡುವ ಕಥೆಯೇ ಈ ಚಿತ್ರದ ಮೂಲವಸ್ತು. 2022 ರಲ್ಲಿ ಜರುಗಿದ 68 ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು. ಡೊಳ್ಳು ಸಿನಿಮಾ ಆಗಸ್ಟ್ 26ರಂದು ತೆರೆಗೆ ಬಂದಿತ್ತು.