ದೂರದರ್ಶನ ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇದು ಅವರಿಗೆ ಚೊಚ್ಚಲ ಸಿನಿಮಾ. ಈ ಸಿನಿಮಾದಲ್ಲಿ 'ದಿಯಾ' ಹೀರೊ ಪೃಥ್ವಿ ಅಂಬರ್ ನಾಯಕನಾಗಿದ್ದರೆ, ಅಯಾನ ನಾಯಕಿ. ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೊನೆಯ ಹಂತದ ಕೆಲಸ ಮುಗಿದರೆ, ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ಕಥೆ: ಹಳ್ಳಿಯೊಂದಕ್ಕೆ ಟಿವಿಯ ಎಂಟ್ರಿ ಕೊಡುತ್ತೆ. ಅಲ್ಲಿಂದ ಆ ಹಳ್ಳಿಯಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಅನ್ನೋದೇ ಸಿನಿಮಾದ ಕಥೆ. ಕಥೆಯಲ್ಲಿ ಗಂಭೀರತೆ ಜೊತೆ ಜೊತೆಗೆ ಹಾಸ್ಯ ಕೂಡ ಒಳಗೊಂಡಿದೆ.