ದುನಿಯಾ ಚಿತ್ರದಲ್ಲಿ ಮೊದಲ ಬಾರಿಗೆ ವಿಜಯ್ ನಾಯಕನಾಗಿ ಮತ್ತು ರಶ್ಮಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯೋಗೇಶ್, ಕಿಶೋರ್ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಸೂರಿ ಅವರ ನಿರ್ದೇಶನದಲ್ಲಿ ಮತ್ತು ವಿ ಮನೋಹರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಯಾರ ಘೋರಿ ಮೇಲೂ ಯಾರು ಯಾಕೆ ಸತ್ತರು ಅಂತ ಬರೆಯಲ್ಲ ಎಂಬ ಟ್ಯಾಗ್ ಲೈನ್ ನೊಂದಿಗೆ ತೆರೆಕಂಡ ಈ ಚಿತ್ರ ಇಬ್ಬರು ಅನಾಥ ಪ್ರೇಮಿಗಳು ಪ್ರೀತಿ ಭೂಗತ ಜಗತ್ತಿನ ಛಾಯೆಯಲ್ಲಿ ಕಮರಿ ಹೋಗುವ ಕಥೆಯನ್ನು ಕಟ್ಟಿ ಕೊಟ್ಟಿತು.