ಗಿರೀಶ್ ಕಾಸರವಳ್ಳಿ ನಿರ್ದೇಶಿಸನದಲ್ಲಿ ಮೂಡಿ ಬಂದ ದ್ವೀಪ ಚಿತ್ರದಲ್ಲಿ ಸೌಂದರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಾ ಡಿಸೋಜಾ ರವರ ಇದೇ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರವನ್ನು ಸೌಂದರ್ಯರವರೇ ನಿರ್ಮಾಣ ಮಾಡಿದ್ದರು. ಈ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿ, ನಾಲ್ಕು ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಮೂರು ಫಿಲ್ಮ್ ಫೇರ್ ಪ್ರಶಸ್ತಿ ಪಡೆಯಿತು.
ಡ್ಯಾಮ್ ಗಳನ್ನು ಕಟ್ಟುವುದರಿಂದ ನಿಸರ್ಗದ ಮೇಲಾಗು ಪರಿಣಾಮಗಳು ಮತ್ತು ಅಲ್ಲಿನ ಸ್ಥಳೀಯರ ವಲಸೆ ಹೋಗುವ ಪ್ರಕ್ರಿಯೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.