ಇಮೇಲ್ ಸಿನಿಮಾವನ್ನು ಎಸ್.ಆರ್ ರಾಜನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಶೋಕ್ ಕುಮಾರ್ ಬಾಲಕೃಷ್ಣನ್ ನಾಯಕನಾಗಿ ಹಾಗೂ ರಾಗಿಣಿ ದ್ವಿವೇದಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಆದವ್ ಬಾಲಾಜಿ, ಆರತಿ ಶ್ರೀ, ಅಕ್ಷಯ್ ರಾಜ್, ಮಂಜು ನಂಜನಗೂಡು, ಮನೋಬಲ, ಬಿಲ್ಲಿ ಮುರಳಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಇದೊಂದು ವಿಭಿನ್ನ ಕಥಾಹಂದರದ ಸಿನಿಮಾವಾಗಿದ್ದು, ಆನ್‌ಲೈನ್ ಗೇಮ್‌ನಿಂದಾಗುವ ಪರಿಣಾಮಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎಸ್.ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ 'ಇಮೇಲ್' ಸಿನಿಮಾ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿದೆ..