X
ಎಲ್ಲಿದ್ದೆ ಇಲ್ಲಿ ತನಕ
Romance | 11 Oct 2019 | U/A |
Kannada

ಎಲ್ಲಿದ್ದೆ ಇಲ್ಲಿ ತನಕ ಕಥೆ

ಸೃಜನ್ ಲೋಕೇಶ್ ರ ಹೋಮ್ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಮಾಡಿರುವ `ಎಲ್ಲಿದ್ದೆ ಇಲ್ಲಿ ತನಕ' ಚಿತ್ರವನ್ನು ಮಜಾ ಟಾಕೀಸ್ ಖ್ಯಾತಿ ತೇಜಸ್ವಿ ನಿರ್ದೇಶನ ಮಾಡಿದ್ದಾರೆ, ಚಿತ್ರದಲ್ಲಿ ಸೃಜನ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.

ಆಗರ್ಭ ಶ್ರೀಮಂತನ ಮಗ ಸೂರ್ಯ (ಸೃಜನ್ ಲೋಕೇಶ್). ಚಾಲೆಂಜ್ ಅಂದ್ರೆ ಸವಾಲ್ ಆಗಿ ಸ್ವೀಕರಿಸುವ ಯುವಕ. ಸ್ವತಂತ್ರವಾಗಿ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಯಿಂದ ಮಲೇಷಿಯಾದಿಂದ ಭಾರತಕ್ಕೆ ಬರ್ತಾನೆ. ಮೊದಲ ನೋಟದಲ್ಲೇ ನಂದಿನಿ (ಹರಿಪ್ರಿಯಾ) ಮೇಲೆ ಲವ್ವಾಗುತ್ತೆ. ಸ್ನೇಹಿತನನ್ನ ಮುಂದಿಟ್ಟುಕೊಂಡು ಒಂದು ಸುಳ್ಳು ಹೇಳಿ ಆಕೆಯ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಸೂರ್ಯ, ಆ ಪ್ರೀತಿಯನ್ನ ಉಳಿಸಿಕೊಳ್ಳಲು ಸುಳ್ಳಿನ ಕೋಟೆ ಕಟ್ಟುತ್ತಾನೆ. ಸುಳ್ಳಿನಿಂದ ಕಟ್ಟಿದ ಪ್ರೀತಿಯ ಕೋಟೆಯನ್ನ ಉಳಿಸಿಕೊಳ್ಳುತ್ತಾನಾ ಎಂಬುದು ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+