
ಸೃಜನ್ ಲೋಕೇಶ್ ರ ಹೋಮ್ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಮಾಡಿರುವ `ಎಲ್ಲಿದ್ದೆ ಇಲ್ಲಿ ತನಕ' ಚಿತ್ರವನ್ನು ಮಜಾ ಟಾಕೀಸ್ ಖ್ಯಾತಿ ತೇಜಸ್ವಿ ನಿರ್ದೇಶನ ಮಾಡಿದ್ದಾರೆ, ಚಿತ್ರದಲ್ಲಿ ಸೃಜನ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.
ಆಗರ್ಭ ಶ್ರೀಮಂತನ ಮಗ ಸೂರ್ಯ (ಸೃಜನ್ ಲೋಕೇಶ್). ಚಾಲೆಂಜ್ ಅಂದ್ರೆ ಸವಾಲ್ ಆಗಿ ಸ್ವೀಕರಿಸುವ ಯುವಕ. ಸ್ವತಂತ್ರವಾಗಿ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಯಿಂದ ಮಲೇಷಿಯಾದಿಂದ ಭಾರತಕ್ಕೆ ಬರ್ತಾನೆ. ಮೊದಲ ನೋಟದಲ್ಲೇ ನಂದಿನಿ (ಹರಿಪ್ರಿಯಾ) ಮೇಲೆ ಲವ್ವಾಗುತ್ತೆ. ಸ್ನೇಹಿತನನ್ನ ಮುಂದಿಟ್ಟುಕೊಂಡು ಒಂದು ಸುಳ್ಳು ಹೇಳಿ ಆಕೆಯ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಸೂರ್ಯ, ಆ ಪ್ರೀತಿಯನ್ನ ಉಳಿಸಿಕೊಳ್ಳಲು ಸುಳ್ಳಿನ ಕೋಟೆ ಕಟ್ಟುತ್ತಾನೆ....
-
ತೇಜಸ್ವಿDirector
-
ಸೃಜನ್ ಲೋಕೇಶ್Producer
-
ಅರ್ಜುನ್ ಜನ್ಯMusic Director
-
ಕವಿರಾಜ್Lyricst
-
ಚೇತನ್ ಕುಮಾರ್Lyricst
-
ಮಜಾ ಟಾಕೀಸ್ಗೆ ಹೊಸ ಎಂಟ್ರಿ: ಯಾರಿರಬಹುದು ಊಹಿಸಬಲ್ಲಿರಾ?
-
ಚಿರು ಸರ್ಜಾ ಹುಟ್ಟುಹಬ್ಬ: ದರ್ಶನ್, ಸುದೀಪ್, ಸೃಜನ್ ಶುಭಾಶಯ
-
ಸೃಜನ್ ಟಾಕೀಸ್ಗೆ ಬಂದು 'ಮಜಾ' ಮಾಡಿದ ಪುನೀತ್ ರಾಜ್ಕುಮಾರ್
-
ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದರ್ಶನ್
-
ದರ್ಶನ್ ನಂತರ ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ ಹಣ ಸಹಾಯ ಮಾಡಿದ ಸೃಜನ್
-
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
-
ಕನ್ನಡ ಫಿಲ್ಮೀಬೀಟ್ಸುಳ್ಳಿನ ಗೋಡೆ ಮೇಲೆ ಕಟ್ಟುವ ಪ್ರೀತಿಯನ್ನ ಉಳಿಸಿಕೊಳ್ಳಲು ಸೃಜನ್ ಪಡುವ ಹರಸಾಹಸವೇ 'ಎಲ್ಲಿದ್ದೆ ಇಲ್ಲಿ ತನಕ'. ಸಿನಿಮಾ ನೋಡುವ ಎರಡೂವರೆ ಗಂಟೆ ಮನರಂಜನೆ ಖಂಡಿತ. ಸೃಜನ್ ಅವರ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರವಿಲ್ಲ. ಪ್ರೇಕ್ಷಕರಿಗೆ ಬೇಕಾಗಿರುವ ನಗುವಿನ ಟಾನಿಕ್ ಹೊತ್ತು ಬಂದಿದ್ದಾರೆ. ಸೃಜನ್ ಕಲರ್ ಫುಲ್ ಆಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಒಂದು ಸರಳ ಸುಂದರ ಕತೆ ಕೊಟ್ಟಿದ್ದಾರೆ. ನೋಡಲು ಯಾವುದೇ ಮೋಸವಿಲ್ಲ.
ನಿಮ್ಮ ಪ್ರತಿಕ್ರಿಯೆ