ಎವಿಡೆನ್ಸ್ ಸಿನಿಮಾವನ್ನು ಪ್ರವೀಣ ಸಿ. ಪಿ ನಿರ್ದೇಶನ ಮಾಡಿದ್ದಾರೆ. ಮಂಗಳಗೌರಿ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಮಾನಸ ಜೋಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಜೋಶ್ ಖ್ಯಾತಿಯ ರೋಬೊ ಗಣೇಶ್, ಆಕರ್ಷ್ ಆದಿತ್ಯ, ಪೂಜಿತಾ ಬೋಬೆಗೌಡ, ರಚಿತಾ, ಮನಮೋಹನ್ ರೈ ಚಮಕ್ ಚಂದ್ರ, ಶಿವಕುಮಾರ್ ಆರಾದ್ಯ, ಪವನ್ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಕಾರ್ತಿಕ್ ವೆಂಕಟೇಶ್ ಸಂಗೀತ, ರವಿ ಸುವರ್ಣ ಛಾಯಾಗ್ರಹಣ ಸಿನಿಮಾಗಿದೆ. ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಎವಿಡೆನ್ಸ್ ಚಿತ್ರಕ್ಕಿದೆ.
ಕಥೆ: ಕೊಲೆಯೊಂದು ನಡೆದಾಗ ಅದರ ಸಾಕ್ಷ್ಯಾಧಾರ ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥೆ ಎವಿಡೆನ್ಸ್ ಸಿನಿಮಾದಲ್ಲಿದೆ.
ಶ್ರೀಧೃತಿ ಪ್ರೊಡಕ್ಷ್ಸ್ ಹಾಗೂ ರೋಷಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್ ಪ್ರಭು ಕೆ, ಕೆ ಮಾದೇಶ್, ನಟರಾಜ್ ಸಿ.ಎಸ್ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.