twitter

    ಫಾರ್ಚುನರ್ ಕಥೆ

    ಮಂಜುನಾಥ ಅನಿವಾರ್ಯ ನಿರ್ದೇಶಿಸಿರುವ `ಫಾರ್ಚುನರ್' ಚಿತ್ರದಲ್ಲಿ ದಿಗಂತ್,ಸೋನು ಗೌಡ, ಸ್ವಾತಿ ಶರ್ಮಾ,ನವೀನ್ ಕೃಷ್ಣ,ರಾಜೇಶ್ ನಟರಂಗ ಮುಂತಾದ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದಾರೆ.ರಾಜೇಶ್ ಗೋಲ್ಚಾ ನಿರ್ಮಾಣದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.

    ಕಥೆ

    ಶ್ರೀಮಂತ ಮನೆತನದ ನಾಯಕ ಪಾರ್ಥ(ದಿಗಂತ್) ತನ್ನ ವಿಲಾಸಿ ಜೀವನದಿಂದ ದಾರಿ ತಪ್ಪಿ ನೆಡೆಯಿತ್ತುರುತ್ತಾನೆ.ಇವನು ತಂಗಾಳಿಯಂತೆ ತನ್ನ ಬಾಳಲ್ಲಿ ಬರುವ ನಾಯಕಿ ಅನುಷಾಳ(ಸೋನು ಗೌಡ) ಪ್ರೀತಿಯಲ್ಲಿ ಬೀಳುತ್ತಾನೆ. ತನ್ನ ಬಗ್ಗೆ ಮತ್ತು ತನ್ನ ವ್ಯಕ್ತಿತ್ವದ ಬಗ್ಗೆ ಮರೆಮಾಡುವ ಪಾರ್ಥ ಅನುಷಾಳನ್ನು ಮದುವೆಯಾಗುವಲ್ಲಿ ಯಶಸ್ವಿಯಾಗುತ್ತಾನೆ. ನಂತರ ಪಾರ್ಥನ ನಿಜ ವ್ಯಕ್ತಿತ್ವದ ದರ್ಶನವಾದಾಗ ಅನುಷಾ ಅವನಿಂದ ದೂರವಾಗುತ್ತಾಳೆ. ಇದೇ ಸಮಯದಲ್ಲಿ ಪಾರ್ಥನ ಜೀವನದಲ್ಲಿ ಮತ್ತೋಬ್ಬ ಹುಡುಗಿಯ ಆಗಮನವಾಗುತ್ತದೆ. ಪಾರ್ಥ ತನ್ನ ಪ್ರೀತಿಗಾಗಿ ತನ್ನ ವ್ಯಕ್ತಿತ್ವ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾನಾ? ತನ್ನ ಜೀವನವನ್ನು ದಾರಿಗೆ ತರಲು ಅವನು ಅನುಸರಿಸುವ ಮಾರ್ಗಗಳೇನು ಎಂಬುದು ಚಿತ್ರದ ಮೂಲ ಕಥೆಯಾಗಿದೆ.

    ಸುಳ್ಳಿನ ತಳಹದಿಯ ಮೇಲೆ ಕಟ್ಟುವ ಪ್ರೇಮ ಸೌಧವು ಸತ್ಯದರ್ಶನದ ಗಾಳಿಗೆ ತೊನೆದಾಡುತ್ತದೆ. ಮತ್ತು ನಿಜವಾದ ಪ್ರೀತಿಯು,ವ್ಯಕ್ತಿಯಲ್ಲಿ ತರುವ ಬದಲಾವಣೆ ಪರ್ವವನ್ನು ಚಿತ್ರ ಸೂಕ್ಷವಾಗಿ ಚಿತ್ರಿಸುತ್ತದೆ. 

    ಚಿತ್ರದಲ್ಲಿ ನಟಿಸಿದ ಕಲಾವರ್ಗ

    ದಿಗಂತ್

    ಸೋನುಗೌಡ 

     

    **Note:Hey! Would you like to share the story of the movie ಫಾರ್ಚುನರ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X